ಮಲ್ಲೇಶ್ವರ: ವಚನ ಸಾಹಿತ್ಯ ವಿಜಯ ರಥೋತ್ಸವ

ಗುರುವಾರ , ಮಾರ್ಚ್ 21, 2019
25 °C

ಮಲ್ಲೇಶ್ವರ: ವಚನ ಸಾಹಿತ್ಯ ವಿಜಯ ರಥೋತ್ಸವ

Published:
Updated:
ಮಲ್ಲೇಶ್ವರ: ವಚನ ಸಾಹಿತ್ಯ ವಿಜಯ ರಥೋತ್ಸವ

ನೆಲಮಂಗಲ: ತಾಲ್ಲೂಕಿನ ವನಕಲ್ಲು ಗ್ರಾಮದಲ್ಲಿ ಮಲ್ಲೇಶ್ವರ ರಥೋತ್ಸವ ಮತ್ತು ವಚನ ಸಾಹಿತ್ಯ ವಿಜಯ ರಥೋತ್ಸವ ನಡೆಯಿತು.

ಆರ್ಥಿಕ ತಜ್ಞ ಡಾ.ಕೆ.ಶಿವಚಿತ್ತಪ್ಪ ಅವರಿಗೆ ‘ಜಗಜ್ಜ್ಯೋತಿ’, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರಿಗೆ ‘ವನಕಲ್ಲುಶ್ರೀ’, ಸಾಫ್ಟ್‌ವೇರ್‌ ಎಂಜಿನಿಯರ್‌ ಎಚ್‌.ಎಸ್‌.ಅರವಿಂದ್‌ ಅವರಿಗೆ ‘ಬಾಲಗಂಗಾಧರನಾಥ ನಿರ್ಮಲ ಜ್ಯೋತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುವ ಸಮಾಜ ಸೃಷ್ಟಿಯಾಗಿದೆ. ಇದರಿಂದ ವಾಮಮಾರ್ಗದ ಮೂಲಕ ಹಣ ಮತ್ತು ಅಧಿಕಾರ ಸಂಪಾದಿಸುವುದು ಹೆಚ್ಚಾಗಿದೆ. ರಾಜ್ಯದ ಬಜೆಟ್‌ ಅನ್ನೂ ಮೀರಿಸುವಂತಹ ಲೂಟಿ ಮಾಡುವವರು ಇದ್ದಾರೆ ಎಂದು ಸಂತೋಷ್‌ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ರಥೋತ್ಸವದ ಪ್ರಯುಕ್ತ ರಾಜ್ಯ

ಮಟ್ಟದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ನಾಟಕ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry