‘ಮನೆಯಲ್ಲಿ ಸರಳ ವಾತಾವರಣ ಇರಲಿ’

7

‘ಮನೆಯಲ್ಲಿ ಸರಳ ವಾತಾವರಣ ಇರಲಿ’

Published:
Updated:

ಹೆಬ್ರಿ: ಪರೀಕ್ಷೆ ಹತ್ತಿರ ಬಂದಾಗ ಮನೆಯಲ್ಲಿ ಆದಷ್ಟು ಸರಳ ವಾತಾವರಣ ಇದ್ದು, ಮಕ್ಕಳಿಗೆ ಸಮತೋಲನ ದೃಷ್ಟಿಕೋನ ಹೊಂದಬಲ್ಲ ಆತ್ಮವಿಶ್ವಾಸವನ್ನು ಬೆಳೆಸಬೇಕು ಎಂದು ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಆಪ್ತಸಮಾಲೋಚಕಿ ಡಾ. ಸೌಜನ್ಯ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಜೇಸಿಐ ವತಿಯಿಂದ ಹೆಬ್ರಿ ಅಮೃತಭಾರತಿ ಪ್ರೌಢಶಾಲಾ ವಿಭಾಗದ ಪೋಷಕರಿಗೆ ‘ಮಕ್ಕಳ ಮಾನಸಿಕ ಆರೋಗ್ಯದಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಗುರುವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಫ್ಯಾಶನ್ ಯುಗದಲ್ಲಿ ದಾರಿತಪ್ಪುವ, ದುಶ್ಚಟಗಳಿಗೆ ಬಲಿ ಬೀಳುವ ಹದಿಹರೆಯದ ಮಕ್ಕಳನ್ನು ಪೋಷಕರು ಪ್ರೀತಿಯಿಂದ ತಿಳಿಹೇಳಿ, ಸರಿದಾರಿಗೆ ಬರುವಂತೆ ಪ್ರೇರೇಪಿಸಬೇಕು ಎಂದರು.

ಹೆಬ್ರಿ ಜೇಸಿಐ ಅಧ್ಯಕ್ಷೆ ವೀಣಾ ಆರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೇಸಿರೆಟ್ ಪೂರ್ವಾಧ್ಯಕ್ಷೆ ಶಾರದಾ ಬಿ. ಜೋಯಿಸ್ , ಅಮೃತಭಾರತಿ ಕಾಲೇಜಿನ ಟ್ರಸ್ಟಿ ಬಾಲಕೃಷ್ಣ ಮಲ್ಯ, ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಜೇಸಿಐ ನಿಕಟಪೂರ್ವಾಧ್ಯಕ್ಷ ಪ್ರಶಾಂತ ಪೈ, ಜೇಸಿರೇಟ್ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ, ಕಾರ್ಯದರ್ಶಿ ಉದಯ ಸೇರಿಗಾರ್, ಹರಿಪ್ರಸಾದ್ ಶೆಟ್ಟಿ, ಪಾವನ ಲಕ್ಷ್ಮಿ ನಾರಾಯಣ ಜೋಯಸ್, ಸತೀಶ ಕುಲಾಲ್, ಮುಖ್ಯಶಿಕ್ಷಕ ಮೋಹನ ಕೆ., ಅಪರ್ಣಾ ಆಚಾರ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry