ಕ್ಷೇತ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ

7

ಕ್ಷೇತ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ

Published:
Updated:
ಕ್ಷೇತ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ

ಕುಣಿಗಲ್: ಕಾಂಗ್ರೆಸ್ ಸರ್ಕಾರ 110 ತಾಲ್ಲೂಕಿನಲ್ಲಿ ತಲಾ 20ರಿಂದ 30 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ತೆಗೆದುಕೊಂಡ ಪರಿಣಾಮ ರೈತರಿಗೆ ಹಗಲಿನಲ್ಲೂ ವಿದ್ಯುತ್ ಸರಬರಾಜು ಮಾಡುವ ಮೂಲಕ ರೈತರಿಗೆ ಸಹಾಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ಅಮೃತೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ಆಯೋಜಿಸಿದ್ದ ಕಚೇರಿಗಳ ಉದ್ಘಾಟನೆ, ವಿದ್ಯುತ್ ಉಪಸ್ಥಾವರ ಮತ್ತು ಎಚ್‌ವಿಡಿಎಸ್ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಅದರಲ್ಲೂ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ರೈತರಿಂದ ಬಂದ ಮನವಿ ಮೇರೆಗೆ 4 ಉಪಸ್ಥಾವರಗಳನ್ನು ಮಂಜೂರು ಮಾಡಲಾಗಿ 3 ಕಾಮಗಾರಿ ಮುಗಿದಿದೆ. ಒಂದು ಸ್ಥಾವರದ ಕಾಮಗಾರಿ ಬಾಕಿ ಇದೆ. ಎಚ್.ವಿ.ಡಿ.ಎಸ್ ಯೋಜನೆಯಡಿ ₹ 27ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡು ರೈತರಿಗೆ ನೆರವಾಗಿದ್ದೇವೆ ಎಂದು ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕುಣಿಗಲ್ ತಾಲ್ಲೂಕು ಅಭಿವೃದ್ಧಿಯತ್ತ ಸಾಗಿದೆ. ಸಚಿವರು ಸಹ ಕುಣಿಗಲ್ ಅಭಿವೃದ್ಧಿ ಬಗ್ಗೆ ಸಂಸದರಿಗೆ ನೆರವಾಗಿದ್ದಾರೆ. ಇಬ್ಬರಿಗೂ ಕುಣಿಗಲ್ ಕ್ಷೇತ್ರದ ಅಭಿಬೃದ್ಧಿ ಬಗ್ಗೆ ವಿಶೇಷ ಕಾಳಜಿ ಇದೆ ಎಂದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಕ್ತರ್, ಮುಖಂಡ ಆಡಿಟರ್ ನಾಗರಾಜು, ಡಾ.ರಂಗನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಐ.ಜಿ.ವಿಶ್ವನಾಥ್, ತ್ರಿಪುರ ಸುಂದರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry