ಶಿವಾಜಿ ಆದರ್ಶ ಮೈಗೂಡಿಸಿಕೊಳ್ಳಲು ಯುವಕರಿಗೆ ಶಾಸಕಿ ಕರೆ

7

ಶಿವಾಜಿ ಆದರ್ಶ ಮೈಗೂಡಿಸಿಕೊಳ್ಳಲು ಯುವಕರಿಗೆ ಶಾಸಕಿ ಕರೆ

Published:
Updated:

ಹೊಳೆಹೊನ್ನೂರು: ಯುವಕರು ಛತ್ರಪತಿ ಶಿವಾಜಿ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕಿ ಶಾರದಾ ಪೂರ‍್ಯಾನಾಯ್ಕ ಹೇಳಿದರು.

ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಶಿವಸೇನಾ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಿವಾಜಿ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಮಾಡಿರುವುದು ಶ್ಲಾಘನೀಯ. ಶಿವಾಜಿ ರಾಷ್ಟ್ರಾಭಿಮಾನವನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಎಲ್ಲಾ ತಾಯಂದಿರ ಕರ್ತವ್ಯವಾಗಿದೆ. ಜೀಜಾಬಾಯಿ ಮಗನಿಗೆ ಧೈರ್ಯ

ಮತ್ತು ಸಾಹಸ ಕಥೆಗಳನ್ನು ಹೇಳುವುದರ ಮೂಲಕ ಸಾಮ್ರಾಜ್ಯವನ್ನು ಸ್ಥಾಪಿಸುವ ಮಟ್ಟಕ್ಕೆ ಮಗನನ್ನು ಬೆಳೆಸಿದರು. ಜೀಜಾಬಾಯಿ ಅವರಿಂದಾಗಿ ಎಲ್ಲಾ ತಾಯಿಯಂದಿರಿಗೂ ಮಹತ್ವ ಸಿಗುತ್ತಿದೆ. ಶಿವಾಜಿ ಜಯಂತಿಯನ್ನು ಹಳ್ಳಿಹಳ್ಳಿಗಳಲ್ಲಿ ಆಚರಿತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತರಾವ್‍ ಘೋರ್ಪಡೆ ಮಾತನಾಡಿ, ‘ಶಿವಾಜಿ ದೇಶ ಕಂಡಂತಹ ಮಹಾನ್ ನಾಯಕನಾಗಿದ್ದು, ತಾಯಿ ಹಾಗೂ ಗುರು ಸನ್ಮಾರ್ಗ ಇದ್ದಲ್ಲಿ ಏನ್ನಾದರೂ ಸಾಧಿಸುಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಹಿಂದೂ ಸಮಾಜವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ವ್ಯಕ್ತಿ ಆದರ್ಶ ಮತ್ತು ಪ್ರವಚನಗಳನ್ನು ನಾವು ಮುಂದಿನ ಜನಾಂಗಕ್ಕೆ ಕೊಂಡ್ಯೂಯ್ಯುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಾಜಿರಾವ್ ಶಿಂಧೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಬಿಜೆಪಿ ಮುಖಂಡರಾದ ಶಾಂತಾಬಾಯಿ, ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ಲಕ್ಷಣಪ್ಪ, ಎಪಿಎಂಸಿ ಸದಸ್ಯ ಸತೀಶ್, ಜಗದೀಶ್‍ ಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಶಿಲ್ಪರಾಣಿ, ನಾಗಮ್ಮ,ಮಾಜಿ ಛೇರ್ಮನ್‍ ಕುಬೇಂದ್ರಪ್ಪ, ಎಂ. ರಂಗಪ್ಪ, ಡಿ.ಯಲ್ಲಪ್ಪ, ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry