ಆಸ್ಕರ್‌ 2018: 'ದಿ ಶೇಪ್‌ ಆಫ್‌ ವಾಟರ್‌' ಅತ್ಯುತ್ತಮ ಚಿತ್ರ

7

ಆಸ್ಕರ್‌ 2018: 'ದಿ ಶೇಪ್‌ ಆಫ್‌ ವಾಟರ್‌' ಅತ್ಯುತ್ತಮ ಚಿತ್ರ

Published:
Updated:
ಆಸ್ಕರ್‌ 2018: 'ದಿ ಶೇಪ್‌ ಆಫ್‌ ವಾಟರ್‌' ಅತ್ಯುತ್ತಮ ಚಿತ್ರ

ಲಾಸ್‌ ಏಂಜಲೀಸ್‌: ಭಾನುವಾರ 90ನೇ ಅಕಾಡೆಮಿ(ಆಸ್ಕರ್‌) ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ದಿ ಶೇಪ್‌ ಆಫ್‌ ವಾಟರ್‌ 2018ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

ಬೆರಗುಗೊಳಿಸುವ ದೃಶ್ಯಗಳಿರುವ ದಿ ಶೇಪ್‌ ಆಫ್‌ ವಾಟರ್‌ ಚಿತ್ರದ ನಿರ್ದೇಶಿಸಿರುವ ಗಿಲೆರ್ಮೊ ಡೆಲ್‌ ಟೋರೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ರಿಸ್ಟೋಫರ್‌ ನೋಲನ್‌(ಚಿತ್ರ: ಡನ್‌ಕಿರ್ಕ್‌), ಜಾರ್ಡನ್‌ ಪೀಲೆ(ಚಿತ್ರ: ಗೆಟ್‌ ಔಟ್‌) ಸೇರಿ ಇತರ ನಿರ್ದೇಶಕರು ಪೈಪೋಟಿಯಲ್ಲಿದ್ದರು.

ಅತ್ಯುತ್ತಮ ಚಿತ್ರ, ಸಂಗೀತ(ಒರಿಜಿನಲ್‌ ಸ್ಕೋರ್‌-ಅಲೆಗ್ಸಾಂಡರ್‌ ಡೆಸ್‌ಪ್ಲಾಟ್‌), ನಿರ್ಮಾಣ ವಿನ್ಯಾಸ ಹಾಗೂ ನಿರ್ದೇಶನ ವಿಭಾಗದಲ್ಲಿ ದಿ ಶೇಪ್‌ ಆಫ್‌ ವಾಟರ್‌ ಪ್ರಶಸ್ತಿ ಗಳಿಸಿದೆ. ಒಟ್ಟು 13 ವಿಭಾಗಗಳಲ್ಲಿ ಈ ಚಿತ್ರ ಅಂತಿಮ ಹಂತಕ್ಕೆ ಆಯ್ಕೆಯಾಗಿತ್ತು.

ಈಗಾಗಲೇ ಚಿತ್ರವು ಗೋಲ್ಡನ್‌ ಗ್ಲೋಬ್ಸ್‌, ಡಿಜಿಎ, ದಿ ಕ್ರಿಟಿಕ್ಸ್‌ ಚಾಯ್ಸ್‌ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry