‘ತಾರಸಿ ತೋಟದ ಹವ್ಯಾಸ ಬೆಳೆಸಿಕೊಳ್ಳಿ’

7
ಕೈತೋಟದ ಬಗ್ಗೆ ಮಹಿಳೆಯರಿಗೆ ಜಾಗೃತಿ. ಕಿಟ್ ವಿತರಣೆ

‘ತಾರಸಿ ತೋಟದ ಹವ್ಯಾಸ ಬೆಳೆಸಿಕೊಳ್ಳಿ’

Published:
Updated:

ಕನಕಪುರ: ತಾರಸಿ ತೋಟಗಾರಿಕೆ ಹವ್ಯಾಸದಿಂದ ಮನೆಗೆ ಬೇಕಾದ ತರಕಾರಿ, ಸೊಪ್ಪು ಬೆಳೆದುಕೊಳ್ಳುವುದರ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ ಗುಣವಂತ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತಾರಸಿ ಮತ್ತು ಕೈತೋಟದ ಬಗ್ಗೆ ಮಹಿಳೆಯರಿಗೆ ಜಾಗೃತಿ ಮತ್ತು ತಾರಸಿ ತೋಟ ಉಪಕರಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ್‌ ನೇತೃತ್ವದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ತಾರಸಿ ತೋಟದ ಕಿಟ್ ವಿತರಣೆ ಮಾಡಲಾಯಿತು. ತೋಟಗಾರಿಕೆ ಸಹಾಯಕ ಅಧಿಕಾರಿ ವೆಂಕಟೇಗೌಡ, ಕುಮಾರ್, ಹರಿಪ್ರಕಾಶ್, ರಶ್ಮಿ,ನಂಜುಂಡರಾಜೇ ಅರಸ್ ಸಿಬ್ಬಂದಿ ಮಹೇಶ್, ಅಮಿತ್, ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry