‘ಮೋದಿ ಆಡಳಿತಕ್ಕೆ ಜನತೆ ಮೆಚ್ಚುಗೆ’

7

‘ಮೋದಿ ಆಡಳಿತಕ್ಕೆ ಜನತೆ ಮೆಚ್ಚುಗೆ’

Published:
Updated:

ಸಿಂಧನೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಹಾಗೂ ಜನಪರ ಆಡಳಿತಕ್ಕೆ ಇಡೀ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿ, ಮತ್ತೊಮ್ಮೆ ಪ್ರಧಾನಿ ಮಾಡಲು ಪಣ ತೊಟ್ಟಿದ್ದಾರೆ’ ಎಂದು ಸಂಸದ ಸಂಸಣ್ಣ ಕರಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿಂಗಾಪುರ ಮತ್ತು ನಿಟ್ಟೂರು ಮಧ್ಯೆದಲ್ಲಿ ಹರಿಯುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಚಿತ್ರಣವೇ ಬದಲಾಗಿದ್ದು, ವಿಶ್ವವೇ ಭಾರತದತ್ತ ನೋಡುವಂತಾಗಿದೆ. ಅವರ ಕ್ರಾಂತಿಕಾರಿ ನಿಲುವುಗಳನ್ನು ವಿದೇಶದ ಮುಖಂಡರು ಕೊಂಡಾಡುವಂತಾಗಿದೆ’ ಎಂದರು.

‘ತಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಈ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಇಂದು ನೆರವೇರಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರವೂ ಕಾರಣವಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕ ಆರ್.ಸೋಮಲಿಂಗಪ್ಪ, ಬಿಜೆಪಿ ಮುಖಂಡರಾದ ರಾಜಶೇಖರ ಪಾಟೀಲ್, ವೆಂಕನಗೌಡ ಮಲ್ಕಾಪುರ, ಮಧ್ವರಾಜ್, ಜಗ್ಗಿ ವಿರೂಪಾಕ್ಷಪ್ಪ, ಪರಮೇಶ್ವರಪ್ಪ ಆದಿಮನಿ, ವೀರೇಶ ಗೌಡ, ರಮೇಶ, ಲಂಕೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry