ಸಂಘರ್ಷ ಪ್ರತಿಪಾದಿಸುವ ಚಂಡರ ಕೈಗೆ ದೇಶ ಕೊಟ್ಟರೆ ಸರ್ವನಾಶ ಆಗಲಿದೆ : ಶ್ರೀ ಶ್ರೀ ರವಿಶಂಕರ್‌

ಗುರುವಾರ , ಮಾರ್ಚ್ 21, 2019
32 °C

ಸಂಘರ್ಷ ಪ್ರತಿಪಾದಿಸುವ ಚಂಡರ ಕೈಗೆ ದೇಶ ಕೊಟ್ಟರೆ ಸರ್ವನಾಶ ಆಗಲಿದೆ : ಶ್ರೀ ಶ್ರೀ ರವಿಶಂಕರ್‌

Published:
Updated:
ಸಂಘರ್ಷ ಪ್ರತಿಪಾದಿಸುವ ಚಂಡರ ಕೈಗೆ ದೇಶ ಕೊಟ್ಟರೆ ಸರ್ವನಾಶ ಆಗಲಿದೆ : ಶ್ರೀ ಶ್ರೀ ರವಿಶಂಕರ್‌

ನವದೆಹಲಿ : ‘ಸಂಘರ್ಷದ ಮೂಲಕವೇ ಅಸ್ತಿತ್ವ ತೋರ್ಪಡಿಸಿಕೊಳ್ಳುವ ಚಂಡ ಜನರ ಕೈಗೆ ಈ ದೇಶದ ಭವಿಷ್ಯ ಕೊಡಬೇಡಿ. ಇಲ್ಲಿ ಶಾಂತಿ ನೆಲಸಬೇಕಿದೆ. ನಮ್ಮ ದೇಶವನ್ನು ಸಿರಿಯಾದಂತೆ ಮಾಡಬಾರದು. ಅಂತಹ ಪ್ರಯತ್ನವೇನಾದರೂ ನಡೆದರೆ, ಸರ್ವನಾಶ ಆಗಲಿದೆ’ ಎಂದು ಆರ್ಟ್‌ ಆಫ್‌ ಲೀವಿಂಗ್‌ ಸಂಸ್ಥೆಯ ಸಂಚಾಲಕ ಶ್ರೀ ಶ್ರೀ ರವಿಶಂಕರ್‌ ಹೇಳಿಕೆ ನೀಡಿದ್ದಾರೆ.

ಅಯೋಧ್ಯ ವಿವಾದದ ಕುರಿತು ಸುದ್ದಿಗಾರರು ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅವರು ಈ ಮೇಲಿನ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಬೇಕು ಎಂಬ ಮಾತುಗಳನ್ನು ಅವರು ಇತ್ತೀಚೆಗೆ ಹೇಳಿದ್ದರು.

ಈ ಹೇಳಿಕೆಗೆ ಪರ–ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಚುನಾವಣೆ ಗೆಲ್ಲುವ ಮೂಲಕವೇ ಅಸ್ತಿತ್ವ ಪ್ರತಿಪಾದಿಸುವ ಚಂಡ ಜನರ ಕೈಗೆ ದೇಶದ ಭವಿಷ್ಯ ಕೊಟ್ಟರೂ ಸರ್ವನಾಶ ಆಗಲಿದೆ’ ಎಂದು ವಿನಯ್‌ (vinay@vin_jatt) ಎಂಬುವರು ಪ್ರತಿಕ್ರಿಯಿಸಿದ್ದಾರೆ.

‘ಸಿರಿಯಾದ ಪರಿಸ್ಥಿತಿ ತಲೆದೊರುವಷ್ಟು ನಮ್ಮ ದೇಶ ದುರ್ಬಲವಾಗಿಲ್ಲ’ ಎಂದು ಮನ್ಸೂರ್‌ ಅಹ್ಮದ್‌ (Mansur Ahamed‏ @MansurAhamed4) ಕಮೆಂಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry