ಕಸಾಪದಿಂದ ಕವಿಗೋಷ್ಠಿ

7

ಕಸಾಪದಿಂದ ಕವಿಗೋಷ್ಠಿ

Published:
Updated:

ಸೋಮವಾರಪೇಟೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಯಲ್ಲಿ ಭಾನುವಾರ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಕಿ ರಾಣಿ ರವೀಂದ್ರ ವಹಿಸಿದ್ದರು.

ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ನ.ಲ. ವಿಜಯ, ಎಲ್.ಎಂ. ಪ್ರೇಮಾ, ಅಶ್ವಿನಿ ಕೃಷ್ಣಕಾಂತ್, ಜಲಾ ಕಾಳಪ್ಪ, ಶರ್ಮಿಳಾ ರಮೇಶ್, ಮುರಳೀಧರ್, ಭಾಗ್ಯಾ ಭವೇರಪ್ಪ, ಪುಟ್ಟಣ್ಣ ಆಚಾರ್ಯ, ಕೆ.ಪಿ. ಸುದರ್ಶನ್, ಅನಿತಾ ಶುಭಾಕರ್, ರುಬಿನಾ, ವಸಂತಿ ರವೀಂದ್ರ, ಡಿ.ಎಂ. ಕುಮಾರಪ್ಪ, ದಶಮಿ, ದಿಶಾಂಕ್, ರವೀಂದ್ರ ಹಾನಗಲ್, ಸುಶೀಲಾ ಹಾನಗಲ್, ವಿ.ಎನ್. ರಂಜಿತಾ, ರಾಚು ಶ್ಯಾಂ, ಸಾಹಿತಿ ಡಿ.ಎಂ. ಕುಮಾರಪ್ಪ, ಮಾಲಾಮೂರ್ತಿ ಕಿಶೋರ್‌ಕುಮಾರ್ ತಾವೂರು, ವೈಲೇಶ್, ಎಚ್.ಬಿ. ಜಯಮ್ಮ, ದೊರೇಶ, ಸಿರಿಗೌರಿ ಕವನ ವಾಚಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಡಿ.ಕೆ. ಬೊಮ್ಮಯ್ಯ, ನಿವೃತ್ತ ಸೈನಿಕ ಶೇಖರ್, ಸಾಹಿತಿ ವೈಲೇಶ್, ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಮುರಳೀಧರ, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎಲ್.ಎಂ. ಪ್ರೇಮಾ, ಕೆ.ಎ. ಆದಂ, ಕೋಶಾಧ್ಯಕ್ಷ ಎ.ಪಿ.ವೀರರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry