₹3200 ಕೋಟಿ ಟಿಡಿಎಸ್‌ ಹಗರಣ ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ

7

₹3200 ಕೋಟಿ ಟಿಡಿಎಸ್‌ ಹಗರಣ ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ

Published:
Updated:
₹3200 ಕೋಟಿ ಟಿಡಿಎಸ್‌ ಹಗರಣ ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ

ಮುಂಬೈ: ಆದಾಯ ತೆರಿಗೆ ಇಲಾಖೆಯು ₹3200 ಕೋಟಿ ಮೊತ್ತದ ಟಿಡಿಎಸ್‌ ಹಗರಣ ಪತ್ತೆ ಮಾಡಿದ್ದು ಸುಮಾರು 440ಕ್ಕೂ ಹೆಚ್ಚು ಕಂಪಗಳಿಗೆ ನೋಟಿಸ್ ಜಾರಿ ಮಾಡಿದೆ.

440ಕ್ಕೂ ಹೆಚ್ಚು ಕಂಪೆನಿಗಳು ನೌಕರರಿಂದ ಕಡಿತ ಮಾಡಿದ ಟಿಡಿಎಸ್ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಸಂದಾಯ ಮಾಡದೇ ಸ್ವಂತಕ್ಕೆ ಬಳಸಿಕೊಂಡಿರುವುದನ್ನು ಐಟಿ ಇಲಾಖೆ ಪತ್ತೆ ಮಾಡಿದೆ. ಟಿಡಿಎಸ್ ಹಣವನ್ನು ಠೇವಣಿ ಇರಿಸದ ಕಂಪೆನಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳೂ ತಿಳಿಸಿವೆ.

ಈ ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೆಲವು ಕಂಪನಿಗಳು ಡಿಎಸ್‌ ಹಣವನ್ನು ಬೇರೆ ವ್ಯವಹಾರಕ್ಕೆ ಬಳಸಿಕೊಂಡಿರುವುದು ತಿಳಿದುಬಂದಿದೆ.

ಆರೋಪ ಸಾಬೀತಾದರೆ ಕಂಪನಿಗಳ ಮಾಲೀಕರು ಅಥವಾ ನಿರ್ದೇಶಕರಿಗೆ 3 ರಿಂದ 7 ವರ್ಷಗಳ ವರೆಗೂ ಜೈಲು ಶಿಕ್ಷೆ ನೀಡುವ ಸಾಧ್ಯತೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry