ಆಲಿಯಗೆ ಅಕ್ಕನ ಆ್ಯಕ್ಷನ್‌ ಕಟ್‌

ಶನಿವಾರ, ಮಾರ್ಚ್ 23, 2019
34 °C

ಆಲಿಯಗೆ ಅಕ್ಕನ ಆ್ಯಕ್ಷನ್‌ ಕಟ್‌

Published:
Updated:
ಆಲಿಯಗೆ ಅಕ್ಕನ ಆ್ಯಕ್ಷನ್‌ ಕಟ್‌

ಚೆಲುವೆ ಆಲಿಯಾ ಭಟ್‌ ಅವರ ಮುಂದಿನ ಚಿತ್ರ ‘ಸಡಕ್‌ 2‘ಗೆ ಅಕ್ಕ ಪೂಜಾ ಭಟ್‌ ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರಕ್ಕೆ ಮಹೇಶ್‌ ಭಟ್‌ ಚಿತ್ರಕಥೆ ಹೊಸೆದಿದ್ದಾರೆ. ಚಿತ್ರಕ್ಕೆ ನಾಯಕ ನ ಹುಡುಕಾಟ ನಡೆಯುತ್ತಿದ್ದು ಸಿದ್ಧಾರ್ಥ ಮಲ್ಹೋತ್ರಾ ಹೆಸರು ಕೇಳಿಬರುತ್ತಿದೆ.

1991ರಲ್ಲಿ ಬಂದಿದ್ದ ‘ಸಡಕ್‌’ ಚಿತ್ರದಲ್ಲಿ ಸಂಜಯ್‌ ದತ್‌ ಹಾಗೂ ಪೂಜಾ ಭಟ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಡಕ್‌ 2 ಚಿತ್ರದಲ್ಲಿ ಕೂಡ ಇವರಿಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿ ಜಗತ್ತು ಮಾತಾಡಿಕೊಳ್ಳುತ್ತಿದೆ.

ಅಂದಹಾಗೆ ಆಲಿಯಾ ಅವರ ಸಿನಿಮಾ ಪಟ್ಟಿ ದೊಡ್ಡದಾಗಿಯೇ ಇದೆ. ಅವರ ನಟನೆಯ ರಾಜಿ ಚಿತ್ರ ತೆರೆ ಕಾಣಲು ಸಿದ್ಧತೆ ನಡೆಸಿದೆ. ಅಲ್ಲದೆ ರಣವೀರ್‌ ಸಿಂಗ್‌ ಜೊತೆಗಿನ ‘ಗಲ್ಲಿ ಬಾಯ್‌’ ಚಿತ್ರದ ಚಿತ್ರೀಕರಣದಲ್ಲಿಯೂ ಆಲಿಯಾ ಬ್ಯುಸಿ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry