ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಬಿಟ್ಟು ಊಟ ಮಾಡಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಊಟ ಮಾಡುವಾಗಲೂ ಸ್ಮಾರ್ಟ್‌ಫೋನ್‌ ಕೈಲಿ ಹಿಡಿದಿರುವ ಚಾಳಿ ನಿಮಗಿದೆಯೇ? ಹಾಗಿದ್ದರೆ ನಿಮಗೆ ಊಟ ಮಜಾ ಅನುಭವಿಸಲು ಸಾಧ್ಯವೇ ಇಲ್ಲ.

ಜಗತ್ತಿಗೆಲ್ಲಾ ಗೊತ್ತಿರುವ ಈ ವಿಷಯವನ್ನು  ಕೆನಡಾದ ಕೊಲಂಬಿಯಾ ವಿವಿ ತಜ್ಞರು ಇದೀಗ ಬಹಿರಂಗಪಡಿಸಿದ್ದಾರೆ. ‘ಸ್ನೇಹಿತರು ಮತ್ತು ಬಂಧುಗಳ ಜೊತೆಗೆ ಊಟ ಮಾಡುವಾಗ ಮೊಬೈಲ್‌ ಬಳಸುವವರು ಆ ಸಂದರ್ಭದ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಲು ಸಾಧ್ಯವಿಲ್ಲ’ ಎನ್ನುವುದು ಈ ಅಧ್ಯಯನದ ಸಾರ.

ಅಧ್ಯಯನಕ್ಕಾಗಿ 300 ಮಂದಿಗೆ ವಿವಿಧ ಪ್ರಶ್ನಾವಳಿಗಳನ್ನು ಕೇಳಲಾಗಿತ್ತು. ಅವರಿಗೆ ತಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಬರುವಂತೆ ತಿಳಿಸಲಾಯಿತು. ಕೆಲವರಿಗೆ ಮಾತ್ರವೇ ಸ್ಮಾರ್ಟ್‌ಫೋನ್‌ ನೀಡಿ, ಊಟದ ಮಧ್ಯೆ ಅದನ್ನು ಬಳಸಲು ಸಂಶೋಧಕರು ತಿಳಿಸಿದರು. ನಂತರ ಫೋನ್‌ ಬಳಸಿದವರಿಗೆ ಮತ್ತು ಬಳಸದವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ‘ಫೋನ್‌ ಬಳಕೆದಾರರ ಚಿತ್ತ ಚಂಚಲವಾಗಿರುತ್ತದೆ. ಅವರು ಆ ಸಂದರ್ಭದ ಖುಷಿಯನ್ನು ಅನುಭವಿಸಲು ಸಾಧ್ಯವಿಲ್ಲ’ ಎಂಬ ಫಲಿತಾಂಶ ಹೊರಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT