ತಲೆ ಮೇಲೆ ಮಿಂಚು

7

ತಲೆ ಮೇಲೆ ಮಿಂಚು

Published:
Updated:
ತಲೆ ಮೇಲೆ ಮಿಂಚು

ಹೊಳೆಯುವ ಕೂದಲು ಬೇಕೆಂದು ಜನರು ಎಷ್ಟೆಲ್ಲ ಕಸರತ್ತು ನಡೆಸುತ್ತಾರೆ. ಸುಲಭದಲ್ಲಿ ಮಿಂಚಿನಂಥ ಕೂದಲು ಪಡೆಯುವ ಉಪಾಯ ತಿಳಿಸಿದ್ದಾರೆ ಅಮೆರಿಕದ ಕೇಶ ವಿನ್ಯಾಸಕಿ ಡೇನಿಯಲ್‌.

ಗ್ರಾಹಕರ ತಲೆ ಮೇಲೆ ಮಿಂಚುತ್ತಿರುವ ಕೂದಲಿನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಇವು ಹಂಚಿಕೊಂಡಿದ್ದರು. ಅದನ್ನು ಕಂಡು ಮನಸೋತ ಲಲನೆಯರು ಅನುಕರಿಸಲು ಆರಂಭಿಸಿದರು. ಇವರ ಇನ್‌ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಯಿತು. ಕೇಶ ವಿನ್ಯಾಸಕ್ಕೆ ಫ್ಯಾಷನ್‌ ಕ್ಷೇತ್ರದಲ್ಲಿ ವಿಶೇಷ ಬೇಡಿಕೆ ಇದೆ. ಕಳೆದ ವರ್ಷ ರೇನ್‌ಬೊ ಕೇಶವಿನ್ಯಾಸ ಸುದ್ದಿ ಮಾಡಿದಂತೆ ಈ ಬಾರಿ ಹೊಳೆವ (ಗ್ಲಿಟರ್ಸ್‌) ಕೇಶ ವಿನ್ಯಾಸಕ್ಕೆ ಪ್ರಾಮುಖ್ಯತೆ ಸಿಕ್ಕಿದೆ.

ಮಿಂಚಿನಂಥ ಕೂದಲಿಗೆ ಇವರೇನು ಹರಸಾಹಸ ಪಟ್ಟಿಲ್ಲ. ಗ್ಲಿಟರ್ಸ್‌ ತುಣುಕುಗಳನ್ನು (ಮಿಂಚು) ಬೈತಲೆ ಮೇಲೆ ಹರಡಿದ್ದಾರೆ. ಇವರ ಪ್ರಯತ್ನಕ್ಕೆ ಫಿದಾ ಆಗಿರುವ ಯುವಜನರು ಇದೇ ಮಾದರಿಯನ್ನು ಅನುಕರಿಸುತ್ತಿದ್ದಾರೆ. ಈ ಪೈಕಿ ಯುವಕರ ಸಂಖ್ಯೆಯೇ ಹೆಚ್ಚು ಎನ್ನುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry