ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) ತ್ಯಜಿಸಲು ಮುಂದಾಗಿರುವ ನಟ ಉಪೇಂದ್ರ?

ಗುರುವಾರ , ಮಾರ್ಚ್ 21, 2019
32 °C

ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) ತ್ಯಜಿಸಲು ಮುಂದಾಗಿರುವ ನಟ ಉಪೇಂದ್ರ?

Published:
Updated:
ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) ತ್ಯಜಿಸಲು ಮುಂದಾಗಿರುವ ನಟ ಉಪೇಂದ್ರ?

ಬೆಂಗಳೂರು: ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) ಮೂಲಕ ರಾಜಕೀಯ ಪ್ರವೇಶದ ಕನಸು ಕಂಡಿದ್ದ ನಟ ಉಪೇಂದ್ರ, ಇದೀಗ ಪಕ್ಷ ತ್ಯಜಿಸಲು ಮುಂದಾಗಿದ್ದಾರೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಕೆಪಿಜೆಪಿಯಲ್ಲಿ ಸಂಸ್ಥಾಪಕ ಮಹೇಶ ಗೌಡ ಮತ್ತು ಉಪೇಂದ್ರ ಮಧ್ಯೆ ಮನಸ್ತಾಪ ಮೂಡಿದ್ದು. ಪಕ್ಷ ಬಿಡುವ ಬಗ್ಗೆ ನೇರವಾಗಿ ಯಾವುದೇ ಹೇಳಿಕೆ ನೀಡದ ಅವರು ಮಂಗಳವಾರವರೆಗೆ (ಮಾ. 6) ಕಾದು ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

ಪಕ್ಷದ ಟಿಕೆಟ್ ಹಂಚಿಕೆ ವಿಷಯದಲ್ಲಿ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಉಪೇಂದ್ರ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿಲ್ಲ ಹಾಗೂ ಸರ್ವಾಧಿಕಾರಿ ದೋರಣೆ ತಾಳುತ್ತಿದ್ದಾರೆ ಎಂದು ಕೆಪಿಜೆಪಿ ಪಕ್ಷದ ಕೆಲವರು ದೂರಿದ್ದಾರೆ.

ನೂತನ ರಾಜಕೀಯ ಪಕ್ಷದ ಅರಂಭದ ಸಂದರ್ಭದಲ್ಲಿ ಸಿನಿಮಾ ಡೈಲಾಗ್ ಗಳಂತೆ ಮಾತನಾಡಿದ್ದ ಉಪೇಂದ್ರ, ಯುವ, ಪ್ರಜ್ಞಾವಂತ ಮತದಾರರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದರು.  ಉಪೇಂದ್ರ ಜಿಜೆಪಿ ಸೇರುವ ಸಾಧ್ಯತೆಗಳಿವೆ ಎಂದು ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry