ಉದ್ಯಾನದಿಂದ ಎಷ್ಟೊಂದು ಉಪಯೋಗ ಗೊತ್ತೇ...

ಗುರುವಾರ , ಮಾರ್ಚ್ 21, 2019
33 °C

ಉದ್ಯಾನದಿಂದ ಎಷ್ಟೊಂದು ಉಪಯೋಗ ಗೊತ್ತೇ...

Published:
Updated:
ಉದ್ಯಾನದಿಂದ ಎಷ್ಟೊಂದು ಉಪಯೋಗ ಗೊತ್ತೇ...

ಗಿಡಮರಗಳ ನಡುವಿನ ಪ್ರದೇಶದಲ್ಲಿ ವಾಸಿಸುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ‘ಹೆಲ್ತ್‌ ಅಂಡ್‌ ಪ್ಲೆಸ್‌’ ನಿಯತಕಾಲಿಕೆ ವರದಿ ಹೇಳಿದೆ. ಸುಮಾರು ಐದು ಸಾವಿರ ದೆಹಲಿ ನಿವಾಸಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಮನೆಯ ಸಮೀಪ ಉದ್ಯಾನವಿದ್ದರೆ ಖಿನ್ನತೆ ಆವರಿಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.

ಮನೆಯ ಸಮೀಪವೇ ಉದ್ಯಾನವಿರುವುದರ ಲಾಭವೇನಿದೆ ನೋಡೋಣ ಬನ್ನಿ.

* ಖಿನ್ನತೆ ಕಡಿಮೆ: ದಿನಪೂರ್ತಿ ಮನೆಯಲ್ಲಿ ಕೂರುವುದರಿಂದ ಬುದ್ಧಿಗೆ ಮಂಕು ಕವಿದಂತೆ ಆಗುತ್ತದೆ. ಸಂಜೆ ಹೊತ್ತಿನಲ್ಲಿ ಪಾರ್ಕಿನಲ್ಲಿ ಒಂದು ಸುತ್ತು ಅಡ್ಡಾಡುವುದರಿಂದ ಮನಸು ಉಲ್ಲಾಸಿತವಾಗುತ್ತದೆ. ವಯಸ್ಸಾದರಿಗೆ ಇದು ಹೆಚ್ಚು ಅನ್ವಯಿಸುತ್ತದೆ. ಮರುದಿನದ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಇದು ನೆರವಾಗುತ್ತದೆ.

* ಸಂಪರ್ಕ ಬೆಳೆಯುತ್ತದೆ: ನಗರ ಪ್ರದೇಶಗಳಲ್ಲಿ ಅಪರಿಚತರೇ ಹೆಚ್ಚು. ಅಕ್ಕಪಕ್ಕದ ಮನೆಯವರು ಒಬ್ಬರಿಗೊಬ್ಬರು ಪರಿಚಿತವಿರುವುದಿಲ್ಲ. ಅದೇ ನೀವು ಪಾರ್ಕಿನಲ್ಲಿ ಸುತ್ತು ಹಾಕಿ ಅಲ್ಲಿರುವ ಗೆಳೆಯರ ಗುಂಪಿಗೆ ಹೋಗಿ ‘ನಿಮ್ಮ ಸ್ನೇಹ ಎಲ್ಲಿ ಆಯಿತೆಂತು ಕೇಳಿ’ ಬಹುತೇಕ ಜನರು ‘ಪಾರ್ಕ್‌ನಲ್ಲಿ’ ಎಂದೇ ಉತ್ತರಿಸುತ್ತಾರೆ. ಉದ್ಯಾನಗಳು ಸ್ನೇಹವನ್ನು ಬೆಸೆಯುವ ಸ್ಥಳವೂ ಆಗಿದೆ. ಪಾರ್ಕಿನ ಸ್ನೇಹಿತರೆಲ್ಲರೂ ಹಲವು ಚಟುವಟಿಕೆಗಳನ್ನು ಆಯೋಜಿಸುವುದು ಈಗ ಟ್ರೆಂಡ್‌ ಆಗಿದೆ.

* ಮೂಡ್‌ ಸುಧಾರಿಸುತ್ತದೆ: ನೈಸರ್ಗಿಕ ಪರಿಸರಗಳು ಕೋಪ, ದುಃಖ, ಆಯಾಸದಂತಹ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಹಸಿರು ದೇಹ, ಮನಸಿಗೆ ವಿಶ್ರಾಂತಿ ನೀಡುತ್ತದೆ. ಅಲ್ಲಿ ಹಲವು ಜನಜೀವನದ ದರ್ಶನವೂ ಆಗುವುದರಿಂದ ಕಾಲ ಕಳೆಯುವುದೇ ತಿಳಿಯುವುದಿಲ್ಲ.

* ಆರೋಗ್ಯಕರ ಜೀವನಶೈಲಿ: ಈಗಂತೂ ಹಲವು ಉದ್ಯಾನವನಗಳಲ್ಲಿ ಜಿಮ್‌ಗಳಿವೆ. ವ್ಯಾಯಾಮ ಮಾಡಲು ಹಲವು ಅವಕಾಶಗಳು ಇರುತ್ತವೆ. ಇದರಿಂದ ಒಂದೊಳ್ಳೆ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಧುಮೇಹಿ, ಅಸ್ತಮಾ, ಸಂಧಿವಾತ ಹೀಗೆ ಹಲವು ಕಾಯಿಲೆಯುಳ್ಳವರು ವಾಕಿಂಗ್‌ ಮಾಡಲು ನಗರಗಳಲ್ಲಿ ಪಾರ್ಕ್‌ ಒಳ್ಳೆಯ ಅವಕಾಶ ಒದಗಿಸಿದೆ. ತಂಪಾದ ಗಾಳಿ ಮೆದುಳನ್ನು ಚುರುಕು ಮಾಡುತ್ತದೆ.

* ನಿಮ್ಮನ್ನು ನೀವು ಅರಿಯಿರಿ: ಪ್ರಶಾಂತವಾಗಿರುವ ಉದ್ಯಾನವನದ ಬಳಿ ಹೋಗಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತುಕೊಳ್ಳಿ. ದಿನಪೂರ್ತಿ ನೀವು ಮಾಡಿರುವ ಕೆಲಸವನ್ನು ಮನನ ಮಾಡಿ. ಮನಸು ಪ್ರಶಾಂತವಾಗುವ ಜೊತೆಗೆ, ಮುಂದಿನ ದಾರಿಯೂ ಸ್ಪಷ್ಟವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry