ಐಎಂಎ ಜುವೆಲ್ಸ್‌: ಜಯನಗರ ಮಳಿಗೆ

7

ಐಎಂಎ ಜುವೆಲ್ಸ್‌: ಜಯನಗರ ಮಳಿಗೆ

Published:
Updated:
ಐಎಂಎ ಜುವೆಲ್ಸ್‌: ಜಯನಗರ ಮಳಿಗೆ

ಬೆಂಗಳೂರು: ಚಿನ್ನ ಮತ್ತು ವಜ್ರಾಭರಣ ಮಾರಾಟ ಸಂಸ್ಥೆ ಐಎಂಎ ಜುವೆಲ್ಸ್‌, ಜಯನಗರ 4ನೇ ಬ್ಲಾಕ್‌ನ 11ನೇ ಮುಖ್ಯರಸ್ತೆಯಲ್ಲಿ ತನ್ನ ಎರಡನೆ ಮಳಿಗೆ ಆರಂಭಿಸಿದೆ.

ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ  ಚಿನ್ನ ಮತ್ತು ವಜ್ರದ ವ್ಯಾಪಕ ಶ್ರೇಣಿಯ ಆಭರಣಗಳು ಇಲ್ಲಿ ಲಭ್ಯ ಇವೆ. ಶಾಸ್ತ್ರೀಯ, ಸಮಕಾಲೀನ ಮತ್ತು ದುಬೈನ ಅತ್ಯುತ್ತಮ ವಿನ್ಯಾಸದ ಆಭರಣಗಳೂ ಗ್ರಾಹಕರ ಗಮನ ಸೆಳೆಯಲಿವೆ.

ಸಂಸ್ಥೆಯು ಗ್ರಾಹಕರಿಗೆ ತನ್ನೆಲ್ಲ ವೈವಿಧ್ಯಮಯ ಚಿನ್ನಾಭರಣಗಳ ಮೇಲೆ ಹಲವಾರು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಹರಳು ಮತ್ತು ವೇಸ್ಟೇಜ್‌ ಮೇಲೆ ಯಾವುಧೇ ಶುಲ್ಕ ವಿಧಿಸುತ್ತಿಲ್ಲ. ವರ್ಷದುದ್ದಕ್ಕೂ ತಯಾರಿಕೆ ಶುಲ್ಕದಲ್ಲಿ ಶೇ 50ರಷ್ಟು ಕಡಿತದ ಸೌಲಭ್ಯ ಇರಲಿದೆ.

ಆರಂಭಿಕ ಕೊಡುಗೆಯಾಗಿ ಮಾರ್ಚ್ ತಿಂಗಳಲ್ಲಿ  ತಯಾರಿಕೆ ಮೇಲೆ ಯಾವುದೇ ಶುಲ್ಕ ಇರುವುದಿಲ್ಲ. ಮೊಹಮ್ಮದ್‌ ಮನ್ಸೂರ್‌ ಖಾನ್‌ ಅವರ ಒಡೆತನದ ಐಎಂಎ ಗ್ರೂಪ್‌ ಆಫ್‌ ಕಂಪನಿಯ ಮೊದಲ ಚಿನ್ನಾಭರಣ ಮಾರಾಟ ಮಳಿಗೆಯು ನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿ 2016ರಲ್ಲಿ ಕಾರ್ಯಾರಂಭ ಮಾಡಿತ್ತು. ಹದಿನೈದು ತಿಂಗಳಲ್ಲಿನ ಅದರ ಯಶಸ್ಸಿನಿಂದ ಉತ್ತೇಜನಗೊಂಡು ಈಗ ಈ ಎರಡನೆ ಮಳಿಗೆ ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry