ಬೆಂಗಳೂರಿನಲ್ಲಿ ಸೆಮಿಫೈನಲ್‌

7

ಬೆಂಗಳೂರಿನಲ್ಲಿ ಸೆಮಿಫೈನಲ್‌

Published:
Updated:
ಬೆಂಗಳೂರಿನಲ್ಲಿ ಸೆಮಿಫೈನಲ್‌

ಬೆಂಗಳೂರು: ಇಂಡಿಯನ್ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಮೊದಲ ಘಟ್ಟ ಪೂರ್ತಿಯಾಗಿದ್ದು ಸೆಮಿಫೈನಲ್‌ ಘಟ್ಟಕ್ಕೆ ವೇದಿಕೆ ಸಜ್ಜಾಗಿದೆ.

ಇದೇ ಮೊದಲ ಬಾರಿ ಲೀಗ್‌ನಲ್ಲಿ ಆಡಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ( ಬಿಎಫ್‌ಸಿ) ಅಮೋಘ ಸಾಧನೆಯ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ಚೆನ್ನೈಯಿನ್ ಎಫ್‌ಸಿ, ಎಫ್‌ಸಿ ಗೋವಾ ಮತ್ತು ಎಫ್‌ಸಿ ಪುಣೆ ಸಿಟಿ ತಂಡಗಳು ಸೆಮಿಫೈನಲ್‌ ತಲುಪಿರುವ ಇತರ ತಂಡಗಳು. ನಾಲ್ಕರ ಘಟ್ಟದ ಪಂದ್ಯಗಳು ಇದೇ ಏಳರಿಂದ ನಡೆಯಲಿವೆ. ಸೆಮಿಯಲ್ಲಿ ಬಿಎಫ್‌ಸಿ ತಂಡ ಪುಣೆಯನ್ನೂ ಚೆನ್ನೈ ತಂಡದವರು ಗೋವಾವನ್ನೂ ಎದುರಿಸುವರು.

ಸೆಮಿಫೈನಲ್‌ ಪಂದ್ಯಗಳು ಎರಡು ಲೆಗ್‌ಗಳಲ್ಲಿ ನಡೆಯಲಿದ್ದು ಮೊದಲ ಸೆಮಿಫೈನಲ್‌ನ ಮೊದಲ ಲೆಗ್‌ ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಪುಣೆ ತಂಡಗಳು ಸೆಣಸಲಿವೆ. ಮೊದಲ ಸೆಮಿಫೈನಲ್‌ನ ಎರಡನೇ ಲೆಗ್‌ ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು ಆತಿಥೇಯ ಬಿಎಫ್‌ಸಿಯನ್ನು ಪುಣೆ ಎಫ್‌ಸಿ ಎದುರಿಸಲಿದೆ.

ಎರಡನೇ ಸೆಮಿಫೈನಲ್‌ನ ಮೊದಲ ಲೆಗ್ ಪಂದ್ಯ ಗೋವಾದಲ್ಲಿ ನಡೆಯಲಿದ್ದು ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್‌ ಎಫ್‌ಸಿ ತಂಡಗಳು ಸೆಣಸಲಿವೆ. ಎರಡನೇ ಲೆಗ್ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry