ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಪ್ರಶಸ್ತಿ

ಗುರುವಾರ , ಮಾರ್ಚ್ 21, 2019
27 °C

ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಪ್ರಶಸ್ತಿ

Published:
Updated:
ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಪ್ರಶಸ್ತಿ

ಮಾಸ್ಕೋ: ಭಾರತದ ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆದ ತಾಲ್ ಸ್ಮಾರಕ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಅಂತಿಮ ಸುತ್ತಿನಲ್ಲಿ ಆನಂದ್‌ ಇಸ್ರೇಲ್‌ನ ಬೋರಿಸ್‌ ಗೆಲ್‌ಫಾನ್ಡ್‌ ಅವರೊಂದಿಗೆ ಪಾಯಿಂಟ್ಸ್ ಹಂಚಿಕೊಂಡರು. ಒಂಬತ್ತು ಸುತ್ತುಗಳಲ್ಲಿ ಆನಂದ್‌ ಆರು ಪಾಯಿಂಟ್ಸ್‌ ಗಳಿಸುವ ಮೂಲಕ ಮೊದಲ ಸ್ಥಾನ ಪಡೆದರು. ನಾಲ್ಕರಲ್ಲಿ ಗೆಲುವು ಹಾಗೂ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಅಜರ್‌ಬೈಜಾನ್‌ನ ಶಕಿರ್ಯಾರ್‌ ಮೆಮೆದರೊವ್‌ ಎದುರಿನ ಮೂರನೇ ಸುತ್ತಿನ ಪಂದ್ಯವನ್ನು ಆನಂದ್ ಸೋತಿದ್ದರು.

ರ‍್ಯಾಪಿಡ್ ಚೆಸ್ ವಿಭಾಗದಲ್ಲಿ ಇತ್ತೀಚೆಗೆ ವಿಶ್ವ ಪ್ರಶಸ್ತಿ ಗೆದ್ದುಕೊಂಡಿರುವ ಆನಂದ್ ಜಯದ ಓಟ ಮುಂದುವರಿಸಿದ್ದಾರೆ. ಇಲ್ಲಿ ಇಯಾನ್‌ ನೆಪೊಮ್‌ನಿಯಾಚಿ, ಅಲೆಕ್ಸಾಂಡರ್‌ ಗ್ರಿಸ್‌ಚುಕ್‌, ರಷ್ಯಾದ ದಣಿಲ್‌ ದುಬೊವ್‌, ಅಮೆರಿಕದ ಹಿಕಾರು ನಕಮುರಾ ಎದುರು ಆನಂದ್ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry