46ನೇ ಸ್ಥಾನಕ್ಕೇರಿದ ಪೇಸ್‌

7

46ನೇ ಸ್ಥಾನಕ್ಕೇರಿದ ಪೇಸ್‌

Published:
Updated:
46ನೇ ಸ್ಥಾನಕ್ಕೇರಿದ ಪೇಸ್‌

ನವದೆಹಲಿ: ಭಾರತದ ಅನುಭವಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌, ಸೋಮವಾರ ಎಟಿ‍‍ಪಿ ‍ಬಿಡುಗಡೆ ಮಾಡಿರುವ ಪುರುಷರ ಡಬಲ್ಸ್‌ ವಿಭಾಗದ ವಿಶ್ವ ಕ್ರಮಾಂಕಪಟ್ಟಿಯಲ್ಲಿ 46ನೇ ಸ್ಥಾನಕ್ಕೇರಿದ್ದಾರೆ.

ಹೋದ ವಾರ ನಡೆದಿದ್ದ ದುಬೈ ಚಾಂಪಿಯನ್‌ಷಿಪ್‌ನಲ್ಲಿ ಜೆಮಿ ಸೆರೆಟಾನಿ ಜೊತೆಗೂಡಿ ಆಡಿದ್ದ ಪೇಸ್‌, ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಅವರು ಒಟ್ಟು ಆರು ಸ್ಥಾನ ಪ್ರಗತಿ ಕಂಡಿದ್ದಾರೆ.

ದಿವಿಜ್‌ ಶರಣ್‌ ಒಂದು ಸ್ಥಾನ ಬಡ್ತಿ ಹೊಂದಿದ್ದು 44ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹನ್‌ ಬೋಪಣ್ಣ 20ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪುರವ ರಾಜಾ ಒಂದು ಸ್ಥಾನ ಕಳೆದುಕೊಂಡಿದ್ದು 62ಕ್ಕೆ ಇಳಿದಿದ್ದಾರೆ. ವಿಷ್ಣುವರ್ಧನ 99ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆ ಎನಿಸಿದೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಯೂಕಿ ಭಾಂಬ್ರಿ 110ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ಐದು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ರಾಮಕುಮಾರ್‌ ರಾಮನಾಥನ್‌, ಸುಮಿತ್‌ ನಗಾಲ್‌ ಮತ್ತು ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಕ್ರಮವಾಗಿ 135, 223 ಮತ್ತು 235ನೇ ಸ್ಥಾನಗಳಲ್ಲಿದ್ದಾರೆ.

ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ 255ನೇ ಸ್ಥಾನದಲ್ಲಿದ್ದಾರೆ. ಅವರು ಐದು ಸ್ಥಾನ ಕಳೆದುಕೊಂಡಿದ್ದಾರೆ. ಕರ್ಮನ್‌ ಕೌರ್‌ ಥಂಡಿ 278ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಮಿರ್ಜಾ 13ನೇ ಸ್ಥಾನದಲ್ಲಿ ಮುಂದುವರಿದಿದ್ದು, ಪ್ರಾರ್ಥನಾ ತೊಂಬಾರೆ 141ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry