ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷಿತ್‌, ರೇವತಿಗೆ ಏಕಲವ್ಯ ಪ್ರಶಸ್ತಿ

ಅಥ್ಲೆಟಿಕ್ಸ್‌: ವಿ.ಆರ್. ಬೀಡು, ಮೋಹಿತ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
Last Updated 5 ಮಾರ್ಚ್ 2018, 20:39 IST
ಅಕ್ಷರ ಗಾತ್ರ

ಉಡುಪಿ: ಅಥ್ಲೀಟ್ ಎಸ್. ಹರ್ಷಿತ್, ಬ್ಯಾಸ್ಕೆಟ್‌ಬಾಲ್ ಆಟಗಾರ ರಾಜೇಶ್ ಉಪ್ಪಾರ ಮತ್ತು ಪ್ಯಾರಾ ಈಜುಪಟು ರೇವತಿ ಎಂ. ನಾಯಕ್ ಸೇರಿ 13 ಮಂದಿಗೆ 2016ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಸೋಮವಾರ ಪ್ರಶಸ್ತಿ ಪಟ್ಟಿ ಪ್ರಕಟಿಸಿದರು. ಪ್ರಶಸ್ತಿಯು ₹ 2 ಲಕ್ಷ ನಗದು, ಪ್ರಶಸ್ತಿ ಹಾಗೂ ಏಕಲವ್ಯ ಕಂಚಿನ ಪ್ರತಿಮೆ ಒಳಗೊಂಡಿದೆ.

ಬೆಂಗಳೂರಿನ ಗುರುನಾನಕ್ ಭವನದಲ್ಲಿ ಇದೇ 7 ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಚಿವರು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರು: ಪೂರ್ವಿಷಾ (ಬ್ಯಾಡ್ಮಿಂಟನ್), ರೇಣುಕಾ ದಂಡಿನ (ಸೈಕ್ಲಿಂಗ್), ಮಯೂರ್ ಡಿ.ಭಾನು (ಶೂಟಿಂಗ್), ಎ.ಕಾರ್ತಿಕ್ (ವಾಲಿ ಬಾಲ್) ವಿ. ಮಾಳವಿಕಾ (ಈಜು), ಟಿ.ಕೆ. ಕೀರ್ತನಾ (ರೋಯಿಂಗ್), ಎಂ.ಬಿ.ಅಯ್ಯಪ್ಪ (ಹಾಕಿ), ಸುಖೇಶ್ ಹೆಗ್ಡೆ (ಕಬಡ್ಡಿ), ಗುರುರಾಜ (ವೇಟ್‌ ಲಿಫ್ಟಿಂಗ್‌), ಸಂದೀಪ್ ಬಿ.ಕಾಟೆ (ಕುಸ್ತಿ), ರೇವತಿ ಎಂ ನಾಯಕ್ (ಪ್ಯಾರಾ ಈಜು).

ಕ್ರೀಡಾರತ್ನ ಪ್ರಶಸ್ತಿ ವಿಜೇತರು: ಸೈಯದ್ ಫತೇಶಾ ವಲಿ ಎಚ್. ಬೇಪಾರಿ (ಅಟ್ಯಾಪಟ್ಯಾ), ಕೆ.ಜಿ. ಯಶಸ್ವಿನಿ (ಬಾಲ್ ಬ್ಯಾಡ್ಮಿಂಟನ್), ಶೇಖರ್ ವಾಲಿ (ಗುಂಡು ಎತ್ತುವುದು), ಮುನೀರ್ ಬಾಷಾ (ಕೊಕ್ಕೊ), ಸುಗುಣಸಾಗರ್ ಎಚ್ ವಡ್ರಾಳೆ (ಮಲ್ಲಕಂಬ), ಎಸ್‌. ಸಬಿಯಾ (ಥ್ರೋ ಬಾಲ್), ಎಚ್‌.ಎಸ್. ಆತ್ಮಶ್ರೀ (ಕುಸ್ತಿ), ಧನುಶ್ ಬಾಬು (ರೋಲರ್ ಸ್ಕೇಟಿಂಗ್). ಅಥ್ಲೆಟಿಕ್ಸ್ ತರಬೇತುದಾರ ವಿ.ಆರ್.ಬೀಡು ಹಾಗೂ ಈಜು ತರಬೇತುದಾರ ಎಂ.ಆರ್. ಮೋಹಿತ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರೀಡಾ ರತ್ನ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಕ್ರಮವಾಗಿ ₹ 1.50 ಲಕ್ಷ, ₹ 1 ಲಕ್ಷ ನಗದು ಪ್ರಶಸ್ತಿ ಪತ್ರ ಮತ್ತು ಫಲಕ ಒಳಗೊಂಡಿದೆ.

ಪ್ರಶಸ್ತಿ ಪಡೆದ ಕ್ರೀಡಾ ಪೋಷಕ ಸಂಸ್ಥೆಗಳು
ಉಡುಪಿ ಬ್ರಹ್ಮಾವರದ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್, ಮಿಯಾರಿನ ಕಂಬಳ ರಕ್ಷಣೆ, ನಿರ್ವಹಣೆ ಹಾಗೂ ತರಬೇತಿ ಅಕಾಡೆಮಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಬಳ್ಳಾರಿಯ ಜೆಎಸ್‌ಡಬ್ಲ್ಯೂ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ, ಬೆಳಗಾವಿ ಚಂದರಗಿಯ ಕ್ರೀಡಾ ಉತ್ತೇಜನ ಹಾಗೂ ಸಹಕಾರ ನಿಯಮಿತ, ಬಾಗಲಕೋಟೆಯ ಕಂಠೀರವ ಕೇಸರಿ ರತನ್ ಮಠಪತಿ ಸ್ಪೋರ್ಟ್ಸ್‌ ಅಂಡ್ ಎಜುಕೇಶನ್ ಸೊಸೈಟಿ, ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕೃಷ್ಣಾ ತೀರಾ ರೈತ ಸಂಘ ಹಾಗೂ ಮಂಡ್ಯದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ₹ 5 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT