ಆಸ್ಟ್ರೇಲಿಯಾ ಜಯಭೇರಿ

7

ಆಸ್ಟ್ರೇಲಿಯಾ ಜಯಭೇರಿ

Published:
Updated:
ಆಸ್ಟ್ರೇಲಿಯಾ ಜಯಭೇರಿ

ಡರ್ಬನ್‌: ಮಿಷೆಲ್‌ ಸ್ಟಾರ್ಕ್‌ (75ಕ್ಕೆ4) ಮತ್ತು ಜೋಶ್‌ ಹ್ಯಾಜಲ್‌ವುಡ್‌ (61ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ 118ರನ್‌ಗಳ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಗಳಿಸಿದೆ.

ಗೆಲುವಿಗೆ 417 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ್ದ ಫಾಫ್‌ ಡು ಪ್ಲೆಸಿ ಪಡೆ ದ್ವಿತೀಯ ಇನಿಂಗ್ಸ್‌ನಲ್ಲಿ 92.4 ಓವರ್‌ಗಳಲ್ಲಿ 298ರನ್‌ಗಳಿಗೆ ಆಲೌಟ್‌ ಆಯಿತು.

ನಾಲ್ಕನೇ ದಿನವಾದ ಭಾನುವಾರದ ಅಂತ್ಯಕ್ಕೆ 9 ವಿಕೆಟ್‌ಗೆ 293ರನ್‌ ಗಳಿಸಿದ್ದ ಹರಿಣಗಳ ನಾಡಿನ ತಂಡಕ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ (83; 149ಎ, 11ಬೌಂ) ಆಸರೆಯಾಗುವ ಲಕ್ಷಣ ತೋರಿದ್ದರು.

81ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಡಿ ಕಾಕ್‌ ಈ ಮೊತ್ತಕ್ಕೆ ಎರಡು ರನ್‌ ಸೇರಿಸಿ ವಿಕೆಟ್‌ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 110.4 ಓವರ್‌ಗಳಲ್ಲಿ 351 ಮತ್ತು 74.4 ಓವರ್‌ಗಳಲ್ಲಿ 227.

ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್‌: 51.4 ಓವರ್‌ಗಳಲ್ಲಿ 162 ಮತ್ತು 92.4 ಓವರ್‌ಗಳಲ್ಲಿ 298 (ಕ್ವಿಂಟನ್‌ ಡಿ ಕಾಕ್‌ 83, ಮಾರ್ನ್‌ ಮಾರ್ಕೆಲ್‌

ಔಟಾಗದೆ 3; ಮಿಷೆಲ್‌ ಸ್ಟಾರ್ಕ್‌ 75ಕ್ಕೆ4, ಜೋಶ್‌ ಹ್ಯಾಜಲ್‌ವುಡ್‌ 61ಕ್ಕೆ3, ಪ್ಯಾಟ್‌ ಕಮಿನ್ಸ್‌ 47ಕ್ಕೆ1, ಮಿಷೆಲ್‌ ಮಾರ್ಷ್ 21ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 118ರನ್‌ ಗೆಲುವು ಹಾಗೂ 4 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ.

ಪಂದ್ಯ ಶ್ರೇಷ್ಠ: ಮಿಷೆಲ್‌ ಸ್ಟಾರ್ಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry