ಸದ್ದಾಂ ಹುಸೇಸ್ ಆಸ್ತಿ ಮುಟ್ಟುಗೋಲಿಗೆ ಆದೇಶ

ಸೋಮವಾರ, ಮಾರ್ಚ್ 25, 2019
21 °C

ಸದ್ದಾಂ ಹುಸೇಸ್ ಆಸ್ತಿ ಮುಟ್ಟುಗೋಲಿಗೆ ಆದೇಶ

Published:
Updated:
ಸದ್ದಾಂ ಹುಸೇಸ್ ಆಸ್ತಿ ಮುಟ್ಟುಗೋಲಿಗೆ ಆದೇಶ

ಬಾಗ್ದಾದ್‌: ಗಲ್ಲು ಶಿಕ್ಷೆಗೆ ಗುರಿಯಾದ ಸರ್ವಾಧಿಕಾರಿ ಸದ್ದಾಂ ಹುಸೇನ್‌ ಹಾಗೂ ಆತನ ಆಡಳಿತಾವಧಿಯ 4,200 ಅಧಿಕಾರಿಗಳಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಇರಾಕ್‌ ಸರ್ಕಾರ ಆದೇಶಿಸಿದೆ.

ಇರಾಕ್‌ನ ತನಿಖಾ ಸಂಸ್ಥೆಯು ಸದ್ದಾಂನ ಸಂಬಂಧಿಕರ ಹಾಗೂ ಆತನ ಬಾತ್‌ ಪಕ್ಷದ ಅಧಿಕಾರಿಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ.

‘ಪಟ್ಟಿಯಲ್ಲಿ ಸದ್ದಾಂನ ಹೆಸರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆತನ ಮಕ್ಕಳು, ಮೊಮ್ಮಕ್ಕಳು ಹಾಗೂ ಸಂಬಂಧಿಕರ ಹೆಸರುಗಳೂ ಇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

2003ರಲ್ಲಿ ಅಮೆರಿಕದ ದಾಳಿ ನಡೆದ ಬಳಿಕ ಸದ್ದಾಂ ಹುಸೇನ್‌ನ ಆಡಳಿತ ಅಂತ್ಯಗೊಂಡಿತ್ತು. ವಶಪಡಿಸಿಕೊಳ್ಳುವ ಆಸ್ತಿಯ ದಾಖಲೆಗಳಿಗೆ ಅಧಿಕೃತ ಮೊಹರು ಹಾಕಲು ಹೊಸ ಆದೇಶದಲ್ಲಿ ಸೂಚಿಸಲಾಗಿದೆ.

‘ಪಟ್ಟಿಯಲ್ಲಿ ಹೆಸರಿಸಿರುವ ಅನೇಕರು ಈಗಾಗಲೇ ಮರಣದಂಡನೆಗೆ ಗುರಿಯಾಗಿದ್ದಾರೆ. ಇನ್ನು ಕೆಲವರು ಜೈಲಿನಲ್ಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry