ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ರಕ್ಷಣಾ ವೆಚ್ಚ ಭಾರತಕ್ಕಿಂತ 3 ಪಟ್ಟು ಹೆಚ್ಚು

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್‌: ಈ ವರ್ಷದ ಬಜೆಟ್‌ನಲ್ಲಿ ಚೀನಾ, ರಕ್ಷಣಾ ವೆಚ್ಚಕ್ಕಾಗಿ ₹1,140ಸಾವಿರ ಕೋಟಿ (1.11 ಟ್ರಿಲಿಯನ್‌ ಯಾನ್‌)ಗಳನ್ನು ಮೀಸಲು ಇಟ್ಟಿದೆ. ಕಳೆದ ವರ್ಷಕ್ಕಿಂತ ಈ ಮೊತ್ತವು ಶೇ 8.1ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೇ, ಭಾರತ ಮೀಸಲು ಇಟ್ಟಿರುವ ಹಣಕ್ಕಿಂತ ಇದು ಮೂರು ಪಟ್ಟು ಹೆಚ್ಚಾಗಿದೆ.

ಸೇನೆಯನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸುವ ಅಗತ್ಯವಿದೆ ಎಂದು ಚೀನಾದ ಸಶಸ್ತ್ರ ಪಡೆಗಳ ಮುಖ್ಯಸ್ಥ, ಕಮಾಂಡರ್‌ ಕೂಡ ಆಗಿರುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ ಕಾರಣದಿಂದ ಇಷ್ಟು ದೊಡ್ಡ ಪ್ರಮಾಣವನ್ನು ಅದು ಮೀಸಲು ಇಟ್ಟಿದೆ.

2016ಕ್ಕಿಂತ 2017ರ ಬಜೆಟ್‌ನಲ್ಲಿ ಸೇನೆಗಾಗಿ ₹979ಸಾವಿರ ಕೋಟಿಯನ್ನು (150.5 ಬಿಲಿಯನ್‌ ಡಾಲರ್‌) ಚೀನಾ ಹೆಚ್ಚಿಸಿತ್ತು. ಅಮೆರಿಕದ ನಂತರ ಬೃಹತ್‌ ಮೊತ್ತವನ್ನು ಈ ಕ್ಷೇತ್ರಕ್ಕೆ ಮೀಸಲು ಇಟ್ಟಿರುವ ದೇಶ ಚೀನಾ. 2019ರ ಬಜೆಟ್‌ನಲ್ಲಿ ₹ 4,466ಸಾವಿರ ಕೋಟಿ ( 686ಬಿಲಿಯನ್‌ ಡಾಲರ್‌) ಮೀಸಲು ಇಡುವಂತೆ ಪೆಂಟಗನ್‌ ಕೋರಿದೆ.

ಚೀನಾ: ಭಾರಿ ತೂಕದ ರಾಕೆಟ್ 2019ಕ್ಕೆ ಉಡಾವಣೆ
ಬೀಜಿಂಗ್:
ಅತ್ಯಧಿಕ ಭಾರ ಹೊತ್ತೊಯ್ಯವ ಸಾಮರ್ಥ್ಯದ ಲಾಂಗ್ ಮಾರ್ಚ್–5ಬಿ ರಾಕೆಟ್‌ ಅನ್ನು ಚೀನಾ 2019ರಲ್ಲಿ ಉಡಾವಣೆ ಮಾಡಲಿದೆ. ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳು ಇದೇ ತಿಂಗಳು ಆರಂಭವಾಗಲಿವೆ ಎಂದು ಚೀನಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಇದು 25 ಸಾವಿರ ಕೆ.ಜಿ ತೂಕದ ಪೇಲೋಡ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT