ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಲೈನ್‌ ದುರ್ಬಳಕೆ

ಭಾನುವಾರ, ಮಾರ್ಚ್ 24, 2019
31 °C

ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಲೈನ್‌ ದುರ್ಬಳಕೆ

Published:
Updated:
ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಲೈನ್‌ ದುರ್ಬಳಕೆ

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದೂರವಾಣಿಯ ಲೈನ್‌ ಬಳಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಮ್ಮ ಕಚೇರಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಈ ಹುನ್ನಾರ ನಡೆದಿದ್ದು, ಇದರ ಬಗ್ಗೆ ಆಂತರಿಕ ತನಿಖೆ ನಡೆಸಿ ಕರೆಗಳ ಮೇ ನಿಗಾ ವಹಿಸುವಂತೆ ಅಮೆರಿಕ ಸರ್ಕಾರಕ್ಕೆ ರಾಯಭಾರ ಕಚೇರಿ ಹೇಳಿದೆ. ‌

‘ಭಾರತೀಯ ಪ್ರಜೆಗಳಿಗೆ ಕರೆ ಮಾಡಿ ಅವರ ಕ್ರೆಡಿಟ್‌ ಕಾರ್ಡ್, ಪಾಸ್‌ಪೋರ್ಟ್ ಮತ್ತಿತರ ವೈಯಕ್ತಿಕ ಮಾಹಿತಿಗಳಲ್ಲಿ ತಪ್ಪು ಇರುವುದಾಗಿ ನಂಬಿಸಲಾಗುತ್ತದೆ. ಆ ಮೂಲಕ ಅವರಿಂದ ಹಣದ ಬೇಡಿಕೆಯೊಡ್ಡಿ, ಇವುಗಳನ್ನು ಸರಿಪಡಿಸುವುದಾಗಿ ಹೇಳಲಾಗುತ್ತಿದೆ. ಈ ಕೃತ್ಯ ಮುಂದುವರಿದರೆ ಭಾರತ ಹಾಗೂ ಅಮೆರಿಕದ ಭದ್ರತಾ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಕೆಲ ಭಾರತೀಯ ಪ್ರಜೆಗಳು ಇಂತಹ ಕರೆಗಳನ್ನು ಸ್ವೀಕರಿಸಿದ್ದು, ಅವರು ಈ ಬಗ್ಗೆ ರಾಯಭಾರ  ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವೀಸಾ ಅರ್ಜಿದಾರರು ಕೂಡಾ ಇಂತಹ ಕರೆಗಳನ್ನು ಸ್ವೀಕರಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ಭಾರತೀಯ ರಾಯಭಾರಿ ಅಧಿಕಾರಿಗಳು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಾವ ಬ್ಯಾಂಕ್ ಖಾತೆಗೆ ಜನರು ಹಣ ವರ್ಗಾವಣೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry