12 ಕೋಟಿ ವರ್ಷಗಳ ಹಿಂದಿನ ಪಕ್ಷಿ ಅವಶೇಷ ಪತ್ತೆ

7

12 ಕೋಟಿ ವರ್ಷಗಳ ಹಿಂದಿನ ಪಕ್ಷಿ ಅವಶೇಷ ಪತ್ತೆ

Published:
Updated:

ಲಂಡನ್: ಇತಿಹಾಸಪೂರ್ವ ಕಾಲಕ್ಕೆ ಸೇರಿದೆ ಎನ್ನಲಾದ 12 ಕೋಟಿ ವರ್ಷಗಳ ಹಿಂದಿನ ಮರಿಹಕ್ಕಿಯ ಅವಶೇಷವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಡೈನೊಸಾರ್‌ಗಳ ಯುಗದಲ್ಲಿ ಈ ಪಕ್ಷಿಗಳು ಜಗತ್ತನ್ನು ಹೇಗೆ ಪ್ರವೇಶಿಸಿದವು ಎಂಬ ಕುತೂಹಲಕ್ಕೆ ಉತ್ತರ ಸಿಗಲು ಇದರ ಅಧ್ಯಯನ ನೆರವಾಗಲಿದೆ.

ಮೊಸೊಜೊಯಿಕ್ ಯುಗದ ಎನಾಂಟಿಆರ್ನಿಥೀಸ್ ಗುಂಪಿಗೆ ಈ ಪಕ್ಷಿ ಸೇರಿದೆ ಎಂದು ಬ್ರಿಟನ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಈ ಕಾಲಕ್ಕೆ ಸೇರಿದ ಅತಿಚಿಕ್ಕ ಅವಶೇಷ ಇದು ಎಂದಿದ್ದಾರೆ. 

ಹಕ್ಕಿಯ ಸಂಪೂರ್ಣ ಅಸ್ಥಿಪಂಜರ ಸಿಕ್ಕಿದೆ. ಐದು ಸೆಂಟಿಮೀಟರ್‌ಗಿಂತಲೂ ಕಡಿಮೆ ಉದ್ದವಿದೆ. ಅಂದರೆ ನಮ್ಮ ಕೈಯ ಕಿರುಬೆರಳಿಗಿಂತಲೂ ಚಿಕ್ಕದು. ಬದುಕಿದ್ದಾಗ ಅದರ ತೂಕ 3 ಔನ್ಸ್ ಇತ್ತು. ಹುಟ್ಟಿದ ಕೆಲ ಸಮಯದಲ್ಲೇ ಇದು ಮೃತಪಟ್ಟಿದೆ.

ಅಸ್ಥಿಪಂಜರ ರೂಪುಗೊಳ್ಳುವ ಸಮಯದಲ್ಲೇ ಇದು ಮೃತಪಟ್ಟಿರುವುದರಿಂದ ಹಕ್ಕಿಯ ಮೂಳೆಗಳ ರಚನೆ ಹಾಗೂ ಬೆಳವಣಿಗೆಯನ್ನು ಅಧ್ಯಯನ ನಡೆಸಲು ಅನುಕೂಲವಾಗಲಿದೆ. ಇದರಿಂದ ಪಕ್ಷಿಗಳ ವಿಕಸನದ ಹಂತಗಳನ್ನು ವಿಶ್ಲೇಷಿಸಬಹುದು ಎಂದು ಅಧ್ಯಯನದ ತಂಡದ ಕ್ನಾಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry