ನಾನು ಬಡವರ ಪರ: ರಜನಿ

7

ನಾನು ಬಡವರ ಪರ: ರಜನಿ

Published:
Updated:
ನಾನು ಬಡವರ ಪರ: ರಜನಿ

ಚೆನ್ನೈ: ನಟ ರಜನಿಕಾಂತ್ ಸೋಮವಾರ ಇಲ್ಲಿನ ಡಾ.ಎಂ.ಜಿ.ಆರ್. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ ಅವರ ಪ್ರತಿಮೆ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಎಂಜಿಆರ್ ಅಲ್ಲ. ಆದರೆ, ಅವರ ಹಾಗೆ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.

ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ ನಂತರ ರಜನಿ ಪಾಲ್ಗೊಂಡ ಅತಿ ದೊಡ್ಡ ಕಾರ್ಯಕ್ರಮ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ರಜನಿಕಾಂತ್‌ ಅವರ ಅಭಿಮಾನಿಗಳು, ನಟ ಶಿವಾಜಿ ಗಣೇಶನ್‌ ಅವರ ಮಗ ಪ್ರಭು, ವಿಜಯ್‌ಕುಮಾರ್‌ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಇದ್ದರು.

ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕೆ ಹೋಗುವ ಮಾರ್ಗಗಳಲ್ಲಿ ರಜನಿಕಾಂತ್‌ ಅವರನ್ನು ಸ್ವಾಗತಿಸುವ ಬೃಹತ್‌ ಬ್ಯಾನರ್‌ ಮತ್ತು ಪೋಸ್ಟರ್‌ಗಳನ್ನು ಹಾಕಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry