ಎಚ್ಚರಿಕೆ ವಹಿಸಲು ಸಿಬಿಎಸ್‌ಇ ಸೂಚನೆ

ಮಂಗಳವಾರ, ಮಾರ್ಚ್ 26, 2019
22 °C

ಎಚ್ಚರಿಕೆ ವಹಿಸಲು ಸಿಬಿಎಸ್‌ಇ ಸೂಚನೆ

Published:
Updated:
ಎಚ್ಚರಿಕೆ ವಹಿಸಲು ಸಿಬಿಎಸ್‌ಇ ಸೂಚನೆ

ನವದೆಹಲಿ: ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಲು ಅವುಗಳ ನಕಲು ಪ್ರತಿ ಕಳುಹಿಸಿ ಎಂದು ಕೋರಿ ಬರುವ ಇ–ಮೇಲ್‌ ಹಾಗೂ ಸಂದೇಶಗಳ

ಬಗ್ಗೆ ಎಚ್ಚರ ವಹಿಸುವಂತೆ 10 ಹಾಗೂ 12ನೇ ತರಗತಿಯ ಪರೀಕ್ಷಾ ಕೇಂದ್ರಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸೂಚಿಸಿದೆ.

ಪ್ರಶ್ನೆಪತ್ರಿಕೆ ಕಳುಹಿಸುವಂತೆ ಕೋರಿ ಸಂದೇಶ ಕಳಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಿಗೆ  'ce.cbse2018@gmail.com' ಎಂಬ ಇ–ಮೇಲ್‌ ಐಡಿಯಿಂದ ಸಂದೇಶ ಕಳಿಸಲಾಗುತ್ತಿದೆ. ಇದು ನಕಲಿಯಾಗಿದ್ದು, ಅದನ್ನು ನಿರ್ಲಕ್ಷಿಸುವಂತೆ ಮಂಡಳಿ ತಿಳಿಸಿದೆ.

‘ಪರೀಕ್ಷಾ ಕೇಂದ್ರಗಳಿಂದ ಮಂಡಳಿಯು ಯಾವುದೇ ನಕಲು ಪ್ರತಿಗಳನ್ನು ಕೇಳುವುದಿಲ್ಲ. ಆದ್ದರಿಂದ, ದೇಶ ಮತ್ತು ವಿದೇಶದಲ್ಲಿರುವ ಎಲ್ಲ ಪರೀಕ್ಷಾ ಕೇಂದ್ರಗಳು ಇಂತಹ ಮೇಲ್‌ಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಎಚ್ಚರಿಕೆ ನೀಡಿದೆ.

ದೇಶದಾದ್ಯಂತ 28 ಲಕ್ಷ ವಿದ್ಯಾರ್ಥಿಗಳು ಸೋಮವಾರದಿಂದ ಆರಂಭವಾಗಿರುವ 10 ಮತ್ತು 12ನೇ ತರಗತಿ ಪರೀಕ್ಷೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ...

ಸಿಬಿಐ ತನಿಖೆಗೆ ಅಣ್ಣಾ ಆಗ್ರಹ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry