ಗ್ರಾಹಕರಿಗೆ ಪರಿಶೀಲನೆ ಅವಕಾಶ

7

ಗ್ರಾಹಕರಿಗೆ ಪರಿಶೀಲನೆ ಅವಕಾಶ

Published:
Updated:
ಗ್ರಾಹಕರಿಗೆ ಪರಿಶೀಲನೆ ಅವಕಾಶ

ನವದೆಹಲಿ: ಮೊಬೈಲ್‌ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್‌ ಸಂಖ್ಯೆಗೆ ಎಷ್ಟು ‘ಸಿಮ್‌’ ಜೋಡಣೆಯಾಗಿವೆ ಎಂದು ಒಂದು ಎಸ್‌ಎಂಎಸ್‌ ಮೂಲಕ ತಿಳಿಯಬಹುದು.

ಸಿಮ್‌ ಪಡೆಯುವಾಗ ಗ್ರಾಹಕರು ದೃಢೀಕರಣಕ್ಕಾಗಿ ನೀಡುವ ಆಧಾರ್‌ ಸಂಖ್ಯೆಯನ್ನೇ ಇತರ ಗ್ರಾಹಕರಿಗೂ ಬಳಸುವುದನ್ನು ತಡೆಯಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಈ ಹೊಸ ಆಲೋಚನೆ ಮಾಡಿದೆ.

ಗ್ರಾಹಕರು ತಮ್ಮ ಆಧಾರ್‌ ಸಂಖ್ಯೆಯೊಂದಿಗೆ ಮೊಬೈಲ್‌ ‘ಸಿಮ್‌’ ಜೋಡಣೆಯಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಇದೇ 15ರ ಒಳಗಾಗಿ ಎಸ್‌ಎಂಎಸ್‌ ಆಧಾರಿತ ಹೊಸ ಸೇವೆ ಒದಗಿಸುವಂತೆ ಎಲ್ಲ ಸೇವಾದಾತ ಕಂಪನಿಗಳಿಗೆ ಪ್ರಾಧಿಕಾರ ಗಡುವು ನೀಡಿದೆ.

ಹೊಸ ಸಿಮ್‌ ವಿತರಣೆಯ ವೇಳೆ ಬೇರೆ ಗ್ರಾಹಕರ ಆಧಾರ್‌ ಸಂಖ್ಯೆಯನ್ನು ದೃಢೀಕರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೆಲವು ಕಂಪನಿಗಳ ಪ್ರತಿನಿಧಿಗಳು ಮತ್ತು ಮಾರಾಟಗಾರರ ವಿರುದ್ಧ ದೂರು ಕೇಳಿ ಬಂದ ಕಾರಣ ಪ್ರಾಧಿಕಾರ ಈ ನಿರ್ಧಾರ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry