ಮತ್ತೆ ಆಸ್ಪತ್ರೆಗೆ ದಾಖಲಾದ ಗೋವಾ ಸಿ.ಎಂ ಪರ‍್ರೀಕರ್‌

ಬುಧವಾರ, ಮಾರ್ಚ್ 20, 2019
31 °C

ಮತ್ತೆ ಆಸ್ಪತ್ರೆಗೆ ದಾಖಲಾದ ಗೋವಾ ಸಿ.ಎಂ ಪರ‍್ರೀಕರ್‌

Published:
Updated:
ಮತ್ತೆ ಆಸ್ಪತ್ರೆಗೆ ದಾಖಲಾದ ಗೋವಾ ಸಿ.ಎಂ ಪರ‍್ರೀಕರ್‌

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಅವರು ಸೋಮವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಲಿದ್ದು, ಅಗತ್ಯವಿದ್ದರೆ  ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬೈಗೆ ತೆರಳುವ ಮೊದಲು ಪರ‍್ರೀಕರ್‌ ಅವರು ತಮ್ಮ ನಿವಾಸದಲ್ಲಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದರು. ಸಂಪುಟ ಸಲಹಾ ಸಮಿತಿ ರಚಿಸಿದ್ದು, ತಮ್ಮ ಅನುಪಸ್ಥಿತಿಯಲ್ಲಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆ.

ಹೊಟ್ಟೆನೋವಿನ ಸಮಸ್ಯೆಯಿಂದಾಗಿ ಪರ‍್ರೀಕರ್‌ ಫೆ.15ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ  ಫೆ.25ರಂದು ಗೋವಾ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದರು. ನಂತರ ಅವರು ತಮ್ಮ ನಿವಾಸದಿಂದಲೇ ಸರ್ಕಾರಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry