ಸೂರ್ಯೋದಯಕ್ಕೂ ಮೊದಲೇ ತಾಜ್‌ ಟಿಕೆಟ್‌

7

ಸೂರ್ಯೋದಯಕ್ಕೂ ಮೊದಲೇ ತಾಜ್‌ ಟಿಕೆಟ್‌

Published:
Updated:
ಸೂರ್ಯೋದಯಕ್ಕೂ ಮೊದಲೇ ತಾಜ್‌ ಟಿಕೆಟ್‌

ನವದೆಹಲಿ: ತಾಜ್‌ಮಹಲ್‌ ವೀಕ್ಷಣೆಗೆ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಸೂರ್ಯೋದಯಕ್ಕೆ 45 ನಿಮಿಷ ಮೊದಲೇ ಟಿಕೆಟ್‌ ವಿತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್‌ ಶರ್ಮ, ‘ಸೂರ್ಯೋದಯಕ್ಕೆ 45 ನಿಮಿಷ

ಮುನ್ನ ಟಿಕೆಟ್‌ ವಿತರಣೆ ಆರಂಭವಾಗಲಿದೆ. ಸೂರ್ಯಾಸ್ತಕ್ಕೆ 30 ನಿಮಿಷಮೊದಲು ವಿತರಣೆ ಕಾರ್ಯ ಸ್ಥಗಿತಗೊಳಿಸಲಾಗುತ್ತದೆ. ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆಗೆ ಜನವರಿ 25ರಂದೇ ಸೂಚಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.

ತಾಜ್‌ಮಹಲ್‌ನಲ್ಲಿರುವ ಮೊಘಲರ ಕಾಲದ ಸ್ಮಾರಕಕ್ಕೆ ಪ್ರತಿ ಶುಕ್ರವಾರ ಭೇಟಿ ನೀಡಲು ಅವಕಾಶವಿರುವುದಿಲ್ಲ. ಪ್ರವೇಶ ಶುಲ್ಕವನ್ನು ₹40 ರಿಂದ ₹50ಕ್ಕೆ ಏರಿಕೆ ಮಾಡಲಾಗಿದೆ.

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಾಜ್‌ ಮಹಲ್‌ನಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ₹200 ಶುಲ್ಕ ನಿಗದಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry