ಗೌರಿ ಮನೆ ಬಳಿ ಘಟನೆ ಮರುಸೃಷ್ಟಿ

7

ಗೌರಿ ಮನೆ ಬಳಿ ಘಟನೆ ಮರುಸೃಷ್ಟಿ

Published:
Updated:

ಬೆಂಗಳೂರು: ನವೀನ್‌ನನ್ನು ಸೋಮವಾರ ಮಧ್ಯಾಹ್ನ ಗೌರಿ ಲಂಕೇಶ್ ಅವರ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ ಎಸ್‌ಐಟಿ ತಂಡ, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹಂತಕನ ಚಲನವಲನಗಳನ್ನು ಮರುಸೃಷ್ಟಿ ಮಾಡಿಸಿತು.

ಹಂತಕ ಬೈಕ್‌ನಲ್ಲಿ ಬಂದು ಗೌರಿಯತ್ತ ಗುಂಡು ಹಾರಿಸಿದ್ದ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆ ದೃಶ್ಯಗಳು ಸ್ಪಷ್ಟವಾಗಿರಲಿಲ್ಲ. ಕೃತ್ಯದಲ್ಲಿ ನವೀನ್‌ ಮೇಲೆ ಅನುಮಾನ ಹೊಂದಿರುವ ಎಸ್‌ಐಟಿ, ಆತನ ಹಾಗೂ ಹಂತಕನ ನಡುವೆ ಏನಾದರೂ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಈ ಪ್ರಕ್ರಿಯೆ ಮಾಡಿಸಿತು.

ಆ ದಿನ ಹಂತಕ ಧರಿಸಿದ್ದಂತೆಯೇ ನವೀನ್‌ಗೂ ಬಿಳಿ ಬಣ್ಣದ ಹೆಲ್ಮೆಟ್‌ ಹಾಕಿಸಿ, ಮನೆ ಹತ್ತಿರ ಬೈಕ್‌ನಲ್ಲಿ ಓಡಾಡಿಸಿದರು. ನಂತರ ಮನೆಯ ಗೇಟ್ ಬಳಿ ನಿಂತು, ಗೌರಿಯತ್ತ ಗುಂಡು ಹಾರಿಸುವಂತೆ ಅಣಕು ಪ್ರದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರೂ ಸ್ಥಳದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry