ಕಾಡಿನ ಮಧ್ಯೆ ಹೆಣ್ಣಾನೆ ಮೃತದೇಹ ಪತ್ತೆ

7

ಕಾಡಿನ ಮಧ್ಯೆ ಹೆಣ್ಣಾನೆ ಮೃತದೇಹ ಪತ್ತೆ

Published:
Updated:
ಕಾಡಿನ ಮಧ್ಯೆ ಹೆಣ್ಣಾನೆ ಮೃತದೇಹ ಪತ್ತೆ

ಮುಂಡಗೋಡ (ಉತ್ತರ ಕನ್ನಡ): ಮುಂಡಗೋಡ–ಶಿರಸಿ ಗಡಿಭಾಗದ ಕರಕಲಜಡ್ಡಿ ಅರಣ್ಯಪ್ರದೇಶದಲ್ಲಿ, ಹೆಣ್ಣಾನೆಯೊಂದರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಆನೆಯು ವಾರದ ಹಿಂದೆಯೇ ಅಸುನೀಗಿರಬಹುದು ಎಂದು ಅಂದಾಜಿಸಲಾಗಿದೆ. ಅದರ ಕಳೇಬರ ಇದ್ದ ಜಾಗದಿಂದ ತುಸು ದೂರದಲ್ಲಿ ಹೈಟೆನ್ಶನ್‌ ವಿದ್ಯುತ್‌ ಮಾರ್ಗ ಹಾದು ಹೋಗಿದೆ. ತಂತಿಗೆ ತಾಗಿರುವ ಗಿಡ–ಮರಗಳನ್ನು ಸ್ಪರ್ಶಿಸಿ, ವಿದ್ಯುತ್‌ ಪ್ರವಹಿಸಿ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

‘ಅಂದಾಜು 20ವರ್ಷದ ಹೆಣ್ಣಾನೆಯ ಮೈಮೇಲೆ ಮೇಲೆ ಗಾಯದ ಗುರುತುಗಳಿವೆ. ನಿತ್ರಾಣಗೊಂಡ ಅದು ಕೆಲ ದಿನಗಳ ಹಿಂದೆ ಮೃತಪಟ್ಟಿರಬಹುದು. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿಯಲಿದೆ.’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್‌.ಶಶಿಧರ ತಿಳಿಸಿದರು.

‘ವಿದ್ಯುತ್‌ ಮಾರ್ಗದ ಕೆಳಗಿನ ಗಿಡ

ಮರಗಳು ತಂತಿಗೆ ತಾಗುವಂತಿವೆ. ಇದನ್ನು ದಾಟುವಾಗ ಆನೆಯ ದೇಹದಲ್ಲಿ ವಿದ್ಯುತ್ ಪ್ರವಹಿಸಿರಬಹುದು. ಇದಕ್ಕೆ ಸಾಕ್ಷಿಯಾಗಿ, ಆನೆಯ ಹೊಟ್ಟೆಯ ಕೆಳಭಾಗ ಸುಟ್ಟಂತೆ ಕಾಣುತ್ತದೆ.’ ಎಂದು ಸ್ಥಳೀಯ ದೇವೇಂದ್ರ ನಾಯ್ಕ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry