ಹಣ ವರ್ಗಾವಣೆ ಪ್ರಕರಣ: ಮಿಸಾ ಭಾರ್ತಿಗೆ ಜಾಮೀನು

7

ಹಣ ವರ್ಗಾವಣೆ ಪ್ರಕರಣ: ಮಿಸಾ ಭಾರ್ತಿಗೆ ಜಾಮೀನು

Published:
Updated:
ಹಣ ವರ್ಗಾವಣೆ ಪ್ರಕರಣ: ಮಿಸಾ ಭಾರ್ತಿಗೆ ಜಾಮೀನು

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಮಗಳು ಮಿಸಾ ಭಾರ್ತಿ ಮತ್ತು ಅಳಿಯ ಶೈಲೇಶ್‌ ಕುಮಾರ್ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.

ಈ ಇಬ್ಬರ ವಿರುದ್ಧ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಯಾಗಿತ್ತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರವಿಂದ್ ಕುಮಾರ್ ತಲಾ ₹2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಿದರು. ಅಲ್ಲದೆ, ಅನುಮತಿ ಇಲ್ಲದೆ ದೇಶದಿಂದ ಹೊರಹೋಗುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಇಂತಹ ಅಕ್ರಮ ಎಸಗುವುದು ದೇಶವಿರೋಧಿ ಕೃತ್ಯ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಇವರಿಗೆ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಅತುಲ್ ತ್ರಿಪಾಠಿ ವಾದಿಸಿದರು.

ತ್ರಿಪಾಠಿ ಅವರ ವಾದ ಆಲಿಸಿದ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ಇಬ್ಬರನ್ನೂ ವಶಕ್ಕೆ ಪಡೆದಿಲ್ಲ. ಈಗ ನ್ಯಾಯಾಲಯದ ವಶಕ್ಕೆ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ಇಬ್ಬರಿಗೂ ಜಾಮೀನು ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry