ನಿರ್ದಿಷ್ಟ ದಾಳಿ: ಸಂಜುವಾನ್‌ ದಾಳಿಯ ಸಂಚುಕೋರ ಹತ್ಯೆ

ಬುಧವಾರ, ಮಾರ್ಚ್ 20, 2019
23 °C

ನಿರ್ದಿಷ್ಟ ದಾಳಿ: ಸಂಜುವಾನ್‌ ದಾಳಿಯ ಸಂಚುಕೋರ ಹತ್ಯೆ

Published:
Updated:
ನಿರ್ದಿಷ್ಟ ದಾಳಿ: ಸಂಜುವಾನ್‌ ದಾಳಿಯ ಸಂಚುಕೋರ ಹತ್ಯೆ

ಶ್ರೀನಗರ: ಫೆಬ್ರುವರಿಯಲ್ಲಿ ಸಂಜುವಾನ್‌ ಸೇನಾ ಶಿಬಿರದ ಮೇಲೆ ನಡೆದ ದಾಳಿಯ ಸಂಚುಕೋರ, ಜೈಷ್‌–ಎ–ಮಹಮ್ಮದ್‌ ಸಂಘಟನೆಯ ಉಗ್ರ ಮುಫ್ತಿ ವಕಾಸ್‌ ಎಂಬಾತನನ್ನು ಭದ್ರತಾ ಪಡೆಗಳು ಸೋಮವಾರ ಹತ್ಯೆ ಮಾಡಿವೆ.

ದಕ್ಷಿಣ ಕಾಶ್ಮೀರದ ಅವಂತಿಪೊರಾದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ವಕಾಸ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಕಾಸ್‌ ಇರುವಿಕೆ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಸೇನಾ ಸಿಬ್ಬಂದಿ ಮತ್ತು ವಿಶೇಷ ಕಾರ್ಯಾಚರಣೆ ತಂಡದ ಸದಸ್ಯರನ್ನು ಒಳಗೊಂಡ ತಂಡ, ಹತ್ವಾರ್‌ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ವಕಾಸ್‌ ಹತ್ಯೆಗೆ ‘ನಿರ್ದಿಷ್ಟ ದಾಳಿ’ ನಡೆಸಿದೆ ಎಂದು ಸೇನೆ ತಿಳಿಸಿದೆ.

ಸಂಜುವಾನ್‌ ಸೇನಾ ಶಿಬಿರ ಮೇಲಿನ ದಾಳಿಯಷ್ಟೇ ಅಲ್ಲದೆ, ಲೆಥ್‌ಪೊರಾದ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ನಡೆದ ಆತ್ಮಹತ್ಯಾ ದಾಳಿಗೂ ಈತ ಕಾರಣಕರ್ತನಾಗಿದ್ದ ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಈ ಎನ್‌ಕೌಂಟರ್‌ ನಡೆಸುವ ವೇಳೆ ಸೇನಾ ಸಿಬ್ಬಂದಿ ಅಥವಾ ನಾಗರಿಕರಿಗೆ ಯಾವ ತೊಂದರೆಯೂ ಆಗಿಲ್ಲ ಎಂದು ಅದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry