ಮಸೀದಿ ಕಾಂಪೌಂಡ್‌ ಮೇಲೆ ಕೇಸರಿ ಧ್ವಜ: ಒಬ್ಬ ವಶಕ್ಕೆ

7

ಮಸೀದಿ ಕಾಂಪೌಂಡ್‌ ಮೇಲೆ ಕೇಸರಿ ಧ್ವಜ: ಒಬ್ಬ ವಶಕ್ಕೆ

Published:
Updated:

ಭದ್ರಾವತಿ: ಇಲ್ಲಿನ ಮಾಧವಾಚಾರ್ ವೃತ್ತದ ಸಮೀಪವಿರುವ ಚೌಕ್ ಮಸೀದಿಯ ಕಾಂಪೌಂಡ್ ಮೇಲೆ ಭಾನುವಾರ ಮಧ್ಯರಾತ್ರಿ ಕೇಸರಿ ಧ್ವಜ ಹಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಮಸೀದಿ ಕಾಂಪೌಂಡ್ ಗುಂಬಜ್ ಮೇಲೆ ರಾತ್ರಿ 11.30 ರ ವೇಳೆಗೆ ಧ್ವಜ ಹಾರಿದ್ದನ್ನು ಕಂಡ ಕಾವಲುಗಾರ, ಮಸೀದಿ ಗುರುಗಳಿಗೆ ಮಾಹಿತಿ ನೀಡಿದ್ದರು. ನಂತರ ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಬಾವುಟ ತೆರವುಗೊಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಭೂತನಗುಡಿ ವಾಸಿ ಕೃಷ್ಣ ಎಂಬುವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಷಯ ಹಬ್ಬಿ ಸೋಮವಾರ ಬೆಳಿಗ್ಗೆ ಮಸೀದಿ ಮುಂಭಾಗದ ರಸ್ತೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry