ಬಿಜೆಪಿ ಅವಧಿಯಲ್ಲಿ ಲಾಭದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ; ಕಾಂಗ್ರೆಸ್‌ ಅವಧಿಯಲ್ಲಿ ₹177 ಕೋಟಿ ನಷ್ಟ: ಆರ್‌ಟಿಐ ಮಾಹಿತಿ?

7

ಬಿಜೆಪಿ ಅವಧಿಯಲ್ಲಿ ಲಾಭದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ; ಕಾಂಗ್ರೆಸ್‌ ಅವಧಿಯಲ್ಲಿ ₹177 ಕೋಟಿ ನಷ್ಟ: ಆರ್‌ಟಿಐ ಮಾಹಿತಿ?

Published:
Updated:
ಬಿಜೆಪಿ ಅವಧಿಯಲ್ಲಿ ಲಾಭದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ; ಕಾಂಗ್ರೆಸ್‌ ಅವಧಿಯಲ್ಲಿ ₹177 ಕೋಟಿ ನಷ್ಟ: ಆರ್‌ಟಿಐ ಮಾಹಿತಿ?

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಾಭದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾಂಗ್ರೆಸ್‌ ಅವಧಿಯಲ್ಲಿ ನಷ್ಟ ಅನುಭವಿಸಿರುವ ಕುರಿತು ಆರ್‌ಟಿಐ ಮಾಹಿತಿ ಪ್ರತಿಯನ್ನು ಲೇಖಕ ಚಕ್ರವರ್ತಿ ಸೂಲಿಬೆಲೆ ಟ್ವೀಟಿಸಿದ್ದಾರೆ.

ಬಿಜೆಪಿಯ ಆರ್‌.ಅಶೋಕ್‌ ಸಾರಿಗೆ ಸಚಿವರಾಗಿದ್ದ ಅವಧಿ(2008–2013)ಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭವನ್ನಷ್ಟೇ ಕಂಡಿದ್ದು, ನಷ್ಟ ಅನುಭವಿಸಿಲ್ಲ. ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದ ಅವಧಿ(2013–2017)ಯಲ್ಲಿ ನಷ್ಟದ ಪ್ರಮಾಣ ₹177 ಕೋಟಿಯಷ್ಟಿರುವುದು ಆರ್‌ಟಿಐ ಮಾಹಿತಿ ಪ್ರತಿಯಲ್ಲಿ ಕಾಣಬಹುದು. ಇದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌–ಬಿಜೆಪಿ ವಾಕ್ಸಮರದ ನಡುವೆ 2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 98 ಮಾರ್ಕೊಪೊಲೋ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಮಾರ್ಕೊಪೊಲೋ ಬಸ್ಸುಗಳ ಖರೀದಿ ಕೇಂದ್ರ ಸರ್ಕಾರದ ಸೂಚನೆ ಮತ್ತು ಟೆಂಡರ್‌ ಷರತ್ತಿನ ಅನ್ವಯವೇ ಆಗಿತ್ತು. ಇದರಲ್ಲಿ ನಮ್ಮ ಪಾತ್ರ ಇರಲಿಲ್ಲ’ ಎಂದು ಆಗ ಸಾರಿಗೆ ಸಚಿವರಾಗಿದ್ದ ಆರ್‌. ಅಶೋಕ್‌ ಪ್ರತಿಕ್ರಿಯಿಸಿದ್ದಾರೆ.

ಮಾರ್ಕೊಪೊಲೋ ಬಸ್ಸುಗಳ ಸ್ಥಿತಿ ಹೀಗಿದೆ ಎಂದು ಸೂಲಿಬೆಲೆ ಅವರು ವಿಡಿಯೊ ಒಂದನ್ನು ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry