ತ್ರಿಪುರಕ್ಕೆ ಬಿಪ್ಲಬ್ ಕುಮಾರ್ ದೇಬ್ ಮುಖ್ಯಮಂತ್ರಿ: ನಿತಿನ್‌ ಗಡ್ಕರಿ

7

ತ್ರಿಪುರಕ್ಕೆ ಬಿಪ್ಲಬ್ ಕುಮಾರ್ ದೇಬ್ ಮುಖ್ಯಮಂತ್ರಿ: ನಿತಿನ್‌ ಗಡ್ಕರಿ

Published:
Updated:
ತ್ರಿಪುರಕ್ಕೆ ಬಿಪ್ಲಬ್ ಕುಮಾರ್ ದೇಬ್ ಮುಖ್ಯಮಂತ್ರಿ: ನಿತಿನ್‌ ಗಡ್ಕರಿ

ನವದೆಹಲಿ: ಬಿಪ್ಲಬ್ ಕುಮಾರ್ ದೇಬ್ ತ್ರಿಪುರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಖಚಿತ ಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೇಬ್ ಅವರ ಆಯ್ಕೆಯನ್ನು ಖಚಿತ ಪಡಿಸಿದ್ದಾರೆ. ಜಿಶ್ನು ದೇಬ್ ಬರ್ಮನ್ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವುದಾಗಿ ಬಿಪ್ಲಬ್‌ ಕುಮಾರ್‌ ತಿಳಿಸಿದರು. 

ವಿಪ್ಲಬ್ ಕುಮಾರ್ ದೇಬ್ ಅವರು ತ್ರಿಪುರದ ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕರಾಗಿ ದುಡಿದಿರುವ ದೇಬ್‌, ರಾಜಕೀಯ ಯಾನ ಪ್ರಾರಂಭಿಸುವ ಮೊದಲು ದೆಹಲಿಯಲ್ಲಿ ಜಿಮ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry