ಶಾಲಾ ಆವರಣದಲ್ಲೇ ಮುಖ್ಯೋಪಾಧ್ಯಾಯಿನಿಯ ಕೊಂದ ಮೂವರು ಹಂತಕರು

7

ಶಾಲಾ ಆವರಣದಲ್ಲೇ ಮುಖ್ಯೋಪಾಧ್ಯಾಯಿನಿಯ ಕೊಂದ ಮೂವರು ಹಂತಕರು

Published:
Updated:
ಶಾಲಾ ಆವರಣದಲ್ಲೇ ಮುಖ್ಯೋಪಾಧ್ಯಾಯಿನಿಯ ಕೊಂದ ಮೂವರು ಹಂತಕರು

ನವದೆಹಲಿ: ಮೂವರು ಅಪರಿಚಿತರು ಆಸ್ತಿ ವಿಚಾರವಾಗಿ ಶಾಲಾ ಆವರಣದಲ್ಲಿ  ಶಾಲಾ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮುಖ್ಯೋಪಾಧ್ಯಾಯಿನಿ ಅನಿತಾ ಯಾಧವ್(45) ಮೃತ ಮಹಿಳೆ. ಈ ಘಟನೆ ನಡೆದು ಕೆಲವು ಗಂಟೆಗಳ ಬಳಿಕ ಆಕೆಯ ಸಹೋದರ ಜಯ್ ಕಿಶಾನೆ ಎಂಬುವರ ಮೃತದೇಹ ಹರಿಯಾಣದ ಜಾಜ್ಜರ್ ಜಿಲ್ಲೆಯ ಬದ್ಸಾ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮೃತ ಅನಿತಾ ಯಾಧವ್ ಅವರು ಘುಮನ್ ಹೆರಾ ಗ್ರಾಮದ ರಚನಾ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ. ಈಕೆಯ ಪತಿಯ ಉದ್ಯಮ ಪಾಲುದಾರ ನವೀನ್ ಯಾಧವ್ ಈ ಘಟನೆಯ ಮೂಲ ರೂವಾರಿ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಈಕೆಯ ಸಹೋದರನನ್ನು ಇದೇ ಕಾರಣಕ್ಕೆ ಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.

ಅನಿತಾ ಅವರು ಮನೆಯಲ್ಲೇ ಶಾಲೆಯನ್ನು ನಡೆಸುತ್ತಿದ್ದರು. ಆಗ ಮೂವರು ಶಾಲೆಯ ಒಳಗೆ ನುಗ್ಗಿದ್ದಾರೆ. ಆಸ್ತಿ ವಿಚಾರದಲ್ಲಿ ಇವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಗುಂಡಿಕ್ಕಿ ಕೊಂದಿದ್ದಾರೆ. ಇದೇ ವೇಳೆ ಆಕೆಯ ಮಗನನ್ನು ಕೊಲ್ಲಲು ಯತ್ನಿಸಿದ್ದಾರೆ. ಆದರೆ ಆತನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ದ್ವಾರಕದ ಡಿಸಿಪಿ ಶಿಬೇಶ್ ಸಿಂಗ್ ಹೇಳಿದ್ದಾರೆ.

ಈ ಘಟನೆ ನಡೆದ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಈ ಘಟನೆ ಶಾಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಂತಕರ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

A 45-year-old principal was gunned down inside her school building in outer Delhi on Monday night by three men over a property dispute, police said on Tuesday.

Hours later her brother was found dead at Badsa village in Jhajjar district of Haryana, they added.

Police said Anita Yadav, principal of Rachna Public School at Ghuman Hera village, was shot dead by the three men, who were allegedly led by her husband’s business partner Naveen Yadav.

They suspect the death of her brother Jai Kishan is also related to the case and are probing if he was abducted before being killed.

Police said Anita was at her home — in the same building as the school — when the three men came inside the house.

Shibesh Singh, deputy commissioner of police (Dwarka), said they discussed matters related to some property with Anita before shooting her in the chest. The accused also allegedly shot at her son, who was in the house at the time of the incident, but he escaped unhurt.

“The murder took place around 10pm on Monday. There were no schoolchildren in the building at that time. A part of the crime has been captured on a CCTV camera,” Singh said.

He added that a dispute over six bighas of land could have been the reason behind the murders.

The suspects are on the run and Delhi Police is coordinating with their counterparts in Haryana for more inputs, officials said.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry