ಇನ್‌ಸ್ಪೆಕ್ಟರ್‌ ತಂಗಿಯನ್ನು ಪ್ರೀತಿಸಿದ್ದ ಕಂಡಕ್ಟರ್‌: ಅಪಾರ್ಟ್‌ಮೆಂಟ್‌ ಮಹಡಿಯಿಂದ ಬಿದ್ದು ಕಂಡಕ್ಟರ್‌, ಆತನ ತಾಯಿ ಸಾವು

7

ಇನ್‌ಸ್ಪೆಕ್ಟರ್‌ ತಂಗಿಯನ್ನು ಪ್ರೀತಿಸಿದ್ದ ಕಂಡಕ್ಟರ್‌: ಅಪಾರ್ಟ್‌ಮೆಂಟ್‌ ಮಹಡಿಯಿಂದ ಬಿದ್ದು ಕಂಡಕ್ಟರ್‌, ಆತನ ತಾಯಿ ಸಾವು

Published:
Updated:

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್‌ವೊಬ್ಬರ ತಂಗಿಯನ್ನು ಪ್ರೀತಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌, ತನ್ನ ತಾಯಿ ಜತೆ ಅದೇ ಇನ್‌ಸ್ಪೆಕ್ಟರ್ ನೆಲೆಸಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಕಾಡುಗೋಡಿ ಸಮೀಪದ ಬೆಳತ್ತೂರಿನಲ್ಲಿ ಮಂಗಳವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಮೌನೇಶ್ (34) ಹಾಗೂ ಸುಂದರಮ್ಮ (55) ಮೃತಪಟ್ಟವರು. ತಾಯಿ–ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ತಳ್ಳಿ ಅವರನ್ನು ಹತ್ಯೆಗೈದಿದ್ದಾರೋ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಇನ್‌ಸ್ಪೆಕ್ಟರ್ ಚಂದ್ರಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೊದಲು ಕಾಡುಗೋಡಿ ಠಾಣೆಯಲ್ಲೇ ಇನ್‌ಸ್ಪೆಕ್ಟರ್ ಆಗಿದ್ದ ಚಂದ್ರಪ್ಪ, 2017ರ ಜೂನ್‌ನಲ್ಲಿ ಕೋಲಾರಕ್ಕೆ (ಜಿಲ್ಲಾ ವಿಶೇಷ ದಳ) ವರ್ಗವಾಗಿದ್ದರು.

ಸೋಮವಾರವಷ್ಟೇ ಅವರನ್ನು ತುಮಕೂರು ಜಿಲ್ಲಾ ವಿಶೇಷ ದಳಕ್ಕೆ ವರ್ಗಾಯಿಸಿ ಗೃಹಇಲಾಖೆ ಆದೇಶಿಸಿತ್ತು. ಅವಿವಾಹಿತರಾಗಿದ್ದ ಚಂದ್ರಪ್ಪ, ಬೆಳತ್ತೂರಿನ ‘ಎಂಪ್ರೆಸ್’ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿ ತಂಗಿಯೊಂದಿಗೆ ನೆಲೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry