ಅಮೆರಿಕದ ನೈಸರ್ಗಿಕ ಅನಿಲ ಆಮದು

7

ಅಮೆರಿಕದ ನೈಸರ್ಗಿಕ ಅನಿಲ ಆಮದು

Published:
Updated:
ಅಮೆರಿಕದ ನೈಸರ್ಗಿಕ ಅನಿಲ ಆಮದು

ನವದೆಹಲಿ: ಅಮೆರಿಕದಿಂದ ಇತ್ತೀಚೆಗಷ್ಟೇ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಚಾಲನೆ ನೀಡಿದ್ದ ಭಾರತ, ಈಗ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ಮಾಡಿಕೊಳ್ಳಲು ಆರಂಭಿಸಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ‘ಜಿಎಐಎಲ್‌’  ಪ್ರತಿ ವರ್ಷ 35 ಲಕ್ಷ ಟನ್‌ಗಳಷ್ಟು ‘ಎಲ್‌ಎನ್‌ಜಿ’ ಆಮದು ಮಾಡಿಕೊಳ್ಳಲಾಗುವುದು. ಅಮೆರಿಕದ ಚೆನಿರೆ ಎನರ್ಜಿ ಜತೆ ‘ಜಿಐಎಎಲ್‌’, 2011ರಲ್ಲಿಯೇ ಒಪ್ಪಂದ ಮಾಡಿಕೊಂಡಿತ್ತು. ‘ಎಲ್‌ಎನ್‌ಜಿ’ ಸಾಗಿಸುತ್ತಿರುವ ‘ಮೆರಿಡಿಯನ್‌ ಸ್ಪಿರಿಟ್‌’ ಇದೇ 28ರಂದು ಮಹಾರಾಷ್ಟ್ರದ ದಾಭೋಲ್‌ ತಲುಪಲಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ  ಭಾರತವು ಅಮೆರಿಕದಿಂದ ಕಚ್ಚಾ ತೈಲ ಆಮದು ಮಾಡಿಕೊಂಡಿತ್ತು.  1975ರಲ್ಲಿ ಅಮೆರಿಕವು ಕಚ್ಚಾ ತೈಲ ರಫ್ತು ಸ್ಥಗಿತಗೊಳಿಸಿತ್ತು. ಬರಾಕ್ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಅಮೆರಿಕವು 2015ರಲ್ಲಿ ಈ ರಫ್ತು ನಿಷೇಧ ತೆರವುಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry