7

ನನಗೂ ಒಂದು ಅವಕಾಶ ನೀಡಿ

Published:
Updated:
ನನಗೂ ಒಂದು ಅವಕಾಶ ನೀಡಿ

ಮಂಗಳೂರು: ‘ಎಲ್ಲ ರಾಜಕೀಯ ಪಕ್ಷಗಳಿಗೆ ಅಧಿಕಾರ ನೀಡಿದ್ದೀರಿ. ನನಗೂ ಒಂದು ಬಾರಿ ಅವಕಾಶ ನೀಡಿ. ನಿಮ್ಮ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಬುದ್ಧಿಜೀವಿಗಳು, ಧರ್ಮಗುರುಗಳು ಹಾಗೂ ಪ್ರಜ್ಞಾವಂತ ಮತದಾರರ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಕರಾವಳಿಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಎಂಬುದು ಇಲ್ಲಿಯ ಜನರ ಆಶಯ. ಯಾರೋ ಮಾಡಿದ ತಪ್ಪಿನಿಂದ ದುಷ್ಕೃತ್ಯಗಳು ನಡೆಯುತ್ತಿವೆ. ಆದರೆ ಇಂತಹ ಘಟನೆಗಳನ್ನು ಹತ್ತಿಕ್ಕುವುದು ಸರ್ಕಾರದ ಕರ್ತವ್ಯ. ಅಶಾಂತಿಯ ವಾತಾವರಣ ನಿರ್ಮಾಣ ಆದಾಗ, ಮುಖ್ಯಮಂತ್ರಿ ಇಲ್ಲಿನ ವಿವಿಧ ಸಮಾಜದ ಮುಖಂಡರ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿತ್ತು. ನಿಮ್ಮಂಥವರ ಜತೆ ಚರ್ಚಿಸಿದರೆ ಖಂಡಿತವಾಗಿಯೂ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಇಂತಹ ಪ್ರಯತ್ನ ಮಾಡಲು ಮುಖ್ಯಮಂತ್ರಿಗೆ ಏನು ತೊಂದರೆ ಎಂದು ಅವರು ಪ್ರಶ್ನಿಸಿದರು.

‘ಎತ್ತಿನಹೊಳೆ ವಿಚಾರದಲ್ಲಿ ವೈಜ್ಞಾನಿಕ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಇದೆ. ಹಾಗೆಂದು ಕರಾವಳಿ ಭಾಗದ ಜನರಿಗೆ ತೊಂದರೆ ನೀಡಿ, ಅಲ್ಲಿಗೆ ನೀರನ್ನು ಹರಿಸುವುದು ನನ್ನ ಉದ್ದೇಶವಲ್ಲ’ ಎಂದರು

ನಾನು ಅಧಿಕಾರಕ್ಕೆ ಬಂದರೆ ರಾಜ್ಯದ ಪರಿಸರಕ್ಕೆ ಹಾಗೂ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry