ಸೆರೆನಾಗೆ ಜರೀನಾ ದಿಯಾಸ್‌ ಸವಾಲು

7

ಸೆರೆನಾಗೆ ಜರೀನಾ ದಿಯಾಸ್‌ ಸವಾಲು

Published:
Updated:
ಸೆರೆನಾಗೆ ಜರೀನಾ ದಿಯಾಸ್‌ ಸವಾಲು

ನ್ಯೂಯಾರ್ಕ್‌ (ಎಪಿ/ಎಎಫ್‌ಪಿ): ಅಮೆರಿಕದ ಅನುಭವಿ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, ಗುರುವಾರದಿಂದ ನಡೆಯುವ ಬಿಎನ್‌ಪಿ ಪರಿಬಾಸ್‌ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಕಜಕಸ್ತಾನದ ಜರೀನಾ ದಿಯಾಸ್‌ ಸವಾಲು ಎದುರಿಸಲಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಸೆರೆನಾ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯುತ್ತಿರುವ ಮೊದಲ ಟೂರ್ನಿ ಇದಾಗಿದೆ. ಇದಕ್ಕೂ ಮುನ್ನ ಅವರು ಫೆಡರೇಷನ್‌ ಕಪ್‌ ಟೂರ್ನಿಯ ಡಬಲ್ಸ್‌ ನಲ್ಲಿ ಸಹೋದರಿ ವೀನಸ್‌ ವಿಲಿಯಮ್ಸ್‌ ಜೊತೆಗೂಡಿ ಆಡಿದ್ದರು.

ಫೆಬ್ರುವರಿ 11ರಂದು ನಡೆದಿದ್ದ ಪಂದ್ಯದಲ್ಲಿ ಸೆರೆನಾ ಮತ್ತು ವೀನಸ್‌ 2–6, 3–6ರಲ್ಲಿ ನೆದರ್ಲೆಂಡ್ಸ್‌ನ ಲೆಸ್ಲಿ ಕೆರ್ಖೊವೆ ಮತ್ತು ಡೆಮಿ ಶುರ್ಸ್‌ ವಿರುದ್ಧ ಸೋತಿದ್ದರು.

53ನೇ ಶ್ರೇಯಾಂಕಿತೆ ದಿಯಾಸ್‌ ಅವರನ್ನು ಸೆರೆನಾ ಮಣಿಸಿದರೆ, ಎರಡನೇ ಸುತ್ತಿನಲ್ಲಿ ವಿಶ್ವ ರ‍್ಯಾಂಕಿಂಗ್‌ ನಲ್ಲಿ 29ನೇ ಸ್ಥಾನದಲ್ಲಿರುವ ಕಿಕಿ ಬರ್ಟೆನ್ಸ್‌ ವಿರುದ್ಧ ಆಡಬೇಕಾಗುತ್ತದೆ. ಅದರಲ್ಲೂ ಗೆದ್ದರೆ ಮೂರನೇ ಸುತ್ತಿನಲ್ಲಿ ಅವರಿಗೆ ವೀನಸ್‌ ವಿಲಿಯಮ್ಸ್‌ ಸವಾಲು ಎದುರಾಗುವ ಸಾಧ್ಯತೆ ಇದೆ.

ವಿಕ್ಟೋರಿಯಾ ಅಜರೆಂಕಾ ದೀರ್ಘ ಬಿಡುವಿನ ಬಳಿಕ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 204ನೇ ಸ್ಥಾನ ಹೊಂದಿರುವ ಅಜರೆಂಕಾ ಮೊದಲ ಸುತ್ತಿನಲ್ಲಿ ಹೀಥರ್‌ ವಾಟ್ಸನ್‌ ವಿರುದ್ಧ ಸೆಣಸಲಿದ್ದಾರೆ. ಎರಡನೇ ಸುತ್ತು ಪ್ರವೇ ಶಿಸಿದರೆ 13ನೇ ಶ್ರೇಯಾಂಕಿತೆ ಸ್ಲೊವಾನೆ ಸ್ಟೀಫನ್ಸ್‌ ಎದುರು ಆಡಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry