ಅಶಿಸ್ತು: ನೇಥನ್‌ ಲಿಯೊನ್‌ಗೆ ದಂಡ

ಸೋಮವಾರ, ಮಾರ್ಚ್ 25, 2019
33 °C

ಅಶಿಸ್ತು: ನೇಥನ್‌ ಲಿಯೊನ್‌ಗೆ ದಂಡ

Published:
Updated:
ಅಶಿಸ್ತು: ನೇಥನ್‌ ಲಿಯೊನ್‌ಗೆ ದಂಡ

ಡರ್ಬನ್‌: ಐಸಿಸಿ ನಿಯ ಮಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಆಸ್ಟ್ರೇಲಿಯಾದ ಸ್ಪಿನ್ನರ್‌ ನೇಥನ್‌ ಲಿಯೊನ್‌ಗೆ ಪಂದ್ಯದ ಸಂಭಾವನೆಯ ಶೇಕಡ 15 ರಷ್ಟು ದಂಡ ವಿಧಿಸಲಾಗಿದೆ.

ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದ ವೇಳೆ ನೇಥನ್‌, ಎಬಿ ಡಿವಿಲಿಯರ್ಸ್‌ ಅವರನ್ನು ರನ್‌ಔಟ್‌ ಮಾಡಿದ್ದರು. ಬಳಿಕ ರನ್‌ ಔಟ್‌ನಿಂದ ಪಾರಾಗಲು ಕ್ರೀಸ್‌ನತ್ತ ಡೈವ್‌ ಮಾಡಿದ್ದ ಡಿವಿಲಿಯರ್ಸ್‌ ಮೇಲೆ ಚೆಂಡನ್ನು ಎಸೆದು ಸಹ ಆಟಗಾರರ ಜೊತೆ ಸಂಭ್ರಮಿಸಿದ್ದರು.

ನೇಥನ್‌ ನಡವಳಿಕೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದ್ದರಿಂದ ಪಂದ್ಯದ ರೆಫರಿ ಜೆಫ್‌ ಕ್ರೋವ್‌ ದಂಡ ವಿಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry