ಪುತ್ರನ ಮುಂಗೈ ಕತ್ತರಿಸಿದ ತಂದೆ

7

ಪುತ್ರನ ಮುಂಗೈ ಕತ್ತರಿಸಿದ ತಂದೆ

Published:
Updated:
ಪುತ್ರನ ಮುಂಗೈ ಕತ್ತರಿಸಿದ ತಂದೆ

ಹೈದರಾಬಾದ್‌: ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಪುತ್ರನ ಬಲಗೈ ಮುಂಗೈಯನ್ನೇ ತಂದೆ ಕತ್ತರಿಸಿರುವ ಘಟನೆ ಇಲ್ಲಿ ನಡೆದಿದೆ. ಪಹಾಡಿಷರೀಫ್‌ನ ಮೊಹಮ್ಮದ್‌ ಖಯೂಮ್‌ ಖುರೇಷಿ ಈ ಕೃತ್ಯವೆಸಗಿದ್ದಾರೆ.

ಮೊಹಮ್ಮದ್‌ ಪುತ್ರ ಖಲೀದ್‌ ಖುರೇಷಿಯನ್ನು (19) ಚೈತನ್ಯಪುರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಡಾದ ಮುಂಗೈಯನ್ನು ಕೈಯೊಂದಿಗೆ ಜೋಡಿಸಲು ವೈದ್ಯರು ಪ್ರಯತ್ನ ನಡೆಸಿದ್ದಾರೆ. ಆದರೆ, ಮರುಜೋಡಣೆಯಾಗುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಮೊಹಮ್ಮದ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕೇಬಲ್‌ ಆಪರೇಟರ್‌ ಆಗಿರುವ ಖಲೀದ್‌ ಇತ್ತೀಚೆಗೆ ಹೊಸ ಸ್ಮಾರ್ಟ್‌ ಫೋನ್‌ ಖರೀದಿಸಿದ್ದ. ರಾತ್ರಿ ಸಮಯದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಈತನ ತಂದೆ, ಇಂಥಹ ಹವ್ಯಾಸ ಬಿಡುವಂತೆ ಹೇಳಿದ್ದರು. ಈ ಕುರಿತು ಇಬ್ಬರ ನಡುವೆ ಕೆಲವು ದಿನಗಳ ಹಿಂದೆ ದೊಡ್ಡ ಜಗಳ ನಡೆದಿತ್ತು. ಆಗ ಖಲೀದ್‌ ತನ್ನ ತಂದೆಯ ಕೈಗೆ ಕಚ್ಚಿ ಮನೆಯಿಂದ ಓಡಿ ಹೋಗಿದ್ದ. ಮರಳಿ ಬಂದ ನಂತರವೂ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದರಿಂದ, ಸಿಟ್ಟಿಗೆದ್ದ ಮೊಹಮ್ಮದ್‌ ಆತನ ಮುಂಗೈಯನ್ನೇ ಕತ್ತರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

’ಸೋಮವಾರ ಬೆಳಗಿನ ಜಾವ ಮನೆಯಲ್ಲಿ ಖಲೀದ್‌ ಮತ್ತು ಕುಟುಂಬದ ಎಲ್ಲ ಸದಸ್ಯರು ಇನ್ನೂ ಮಲಗಿದ್ದರು. ಆಗ ಬೇಗ ಎದ್ದ ಮೊಹಮ್ಮದ್‌ ಈ ಕೃತ್ಯವೆಸಗಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry