ವಿಪ್ಲವ್‌ಗೆ ತ್ರಿಪುರಾ ಚುಕ್ಕಾಣಿ

ಸೋಮವಾರ, ಮಾರ್ಚ್ 25, 2019
21 °C

ವಿಪ್ಲವ್‌ಗೆ ತ್ರಿಪುರಾ ಚುಕ್ಕಾಣಿ

Published:
Updated:
ವಿಪ್ಲವ್‌ಗೆ ತ್ರಿಪುರಾ ಚುಕ್ಕಾಣಿ

ಅಗರ್ತಲಾ: ತ್ರಿಪುರಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಪ್ಲವ್‌ ಕುಮಾರ್‌ ದೇವ್‌ ಅವರು ತ್ರಿಪುರಾದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ 48 ವರ್ಷದ ವಿಪ್ಲವ್‌ ಕುಮಾರ್‌ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕ ಜಿಷ್ಣು ದೇವೆ ವರ್ಮನ್‌ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಪ್ಲವ್‌ ಕುಮಾರ್‌ ರಾಜ್ಯಪಾಲರನ್ನು ಕಂಡು ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ ಎಂದು ಪಕ್ಷದ ವೀಕ್ಷಕ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ  ತಿಳಿಸಿದರು.

ಆರಂಭದಲ್ಲಿಯೇ ಭಿನ್ನಮತದ ಬಿಸಿ

ಬಿಜೆಪಿಯ ಮಿತ್ರಪಕ್ಷ ಇಂಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌ಟಿ) ಶಾಸಕರು ಸಭೆಯಿಂದ ದೂರ ಉಳಿದಿದ್ದರು.

ಸಚಿವ ಸಂಪುಟದಲ್ಲಿ ಪಕ್ಷದ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ. ಹೊರಗಿನಿಂದ ಬೆಂಬಲ ನೀಡುವುದಾಗಿ ಐಪಿಎಫ್‌ಟಿ ಎಚ್ಚರಿಕೆ ನೀಡಿತ್ತು.

ಬುಡಕಟ್ಟು ಜನಾಂಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವಂತೆಯೂ ಬೇಡಿಕೆ ಇಟ್ಟಿತ್ತು.

ಬಿಜೆಪಿ 35 ಶಾಸಕರನ್ನು ಮತ್ತು ಐಪಿಎಫ್‌ಟಿ ಎಂಟು ಶಾಸಕರನ್ನು ಹೊಂದಿದೆ.

ಮಾಜಿ ಜಿಮ್‌ ತರಬೇತುದಾರ ಈಗ ಸಿ.ಎಂ

* 48 ವರ್ಷದ ವಿಪ್ಲವ್‌ ಕುಮಾರ್‌ ದೇವ್‌ ಅವರು ದೆಹಲಿಯಲ್ಲಿ ಜಿಮ್‌ ತರಬೇತುದಾರರಾಗಿ ಕೆಲ ಕಾಲ ಕೆಲಸ ಮಾಡಿದ್ದಾರೆ.

* 16 ವರ್ಷ ಆರ್‌ಎಸ್‌ಎಸ್‌ನಲ್ಲಿದ್ದ ಅವರನ್ನು 2016ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

* ಅವರ ತಂದೆ ಹರಧನ್‌ ದೇವ್‌ ಅವರು ಜನಸಂಘದ ಸ್ಥಳೀಯ ನಾಯಕರಾಗಿದ್ದರು. ವಿಪ್ಲವ್‌ ಅವರ ಪತ್ನಿ ನೀತಿ ದೇವ್‌ ಬ್ಯಾಂಕ್‌ ಉದ್ಯೋಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry