ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಬಾಲ್ಯ ವಿವಾಹ ಇಳಿಕೆ

ಮಕ್ಕಳ ವಿವಾಹ ಪ್ರಮಾಣ ಶೇ 47ರಿಂದ ಶೇ 27ಕ್ಕೆ ಇಳಿಕೆ
Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 18 ವರ್ಷದೊಳಗಿನ ಮಕ್ಕಳ ವಿವಾಹ ಪ್ರಮಾಣ ಶೇ 47ರಿಂದ ಶೇ 27ಕ್ಕೆ ಇಳಿದಿದೆ. ಹಿಂದೆ ಪ್ರತಿ ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದು ಮಗು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿತ್ತು. ಈಗ ಆ ಪ್ರಮಾಣ 5:1ಕ್ಕೆ ಇಳಿದಿದೆ ಎಂದು ಯುನಿಸೆಫ್‌ ಹೇಳಿದೆ.

ಈ ಪ್ರಮಾಣ ಜಾಗತಿಕ ಮಟ್ಟದಲ್ಲಿ ಬಾಲ್ಯ ವಿವಾಹದ ಪ್ರಮಾಣವನ್ನು ಕಡಿಮೆ ಮಾಡಲಿದೆ. ಒಂದು ದಶಕದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಶೇ 20ರಷ್ಟು ಇಳಿಕೆಯಾಗಿದೆ.

2005ರಿಂದ 2016ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 2.5 ಕೋಟಿ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಅದರಲ್ಲೂ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕೆ ಭಾರತೀಯರಲ್ಲಿ ಮೂಡಿರುವ ಜಾಗೃತಿಯೇ  ಕಾರಣ ಎಂದು ಯನಿಸೆಫ್‌ನ ಪ್ರಕಟಣೆ ತಿಳಿಸಿದೆ.

ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣದಲ್ಲಿ ಹೆಚ್ಚಳ, ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರಿ ಹೂಡಿಕೆ ಹೆಚ್ಚಿರುವುದು, ಬಾಲ್ಯ ವಿವಾಹದ ಅಪಾಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿರುವುದು ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಗುರುತಿಸಿದೆ.

ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಿ ಹೆಣ್ಣುಮಕ್ಕಳಿಗೆ ಉತ್ತಮ ಜೀವನ ಸಿಗುವುದು ಒಳ್ಳೆಯ ಬೆಳವಣಿಗೆ. ಆದರೆ ನಾವು ಇನ್ನೂ ದೂರ ಸಾಗಬೇಕಿದೆ ಎಂದು ಯುನಿಸೆಫ್‌ನ ಸಲಹೆಗಾರ್ತಿ ಅಂಜು ಮಲ್ಹೋತ್ರಾ  ಹೇಳಿದ್ದಾರೆ.

2030ರ ವೇಳೆಗೆ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರತಿಜ್ಞೆ ಮಾಡಲಾಗಿದೆ. ಲಕ್ಷಾಂತರ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಿ, ಬಾಲ್ಯ ಅನುಭವಿ ಸುವಂತೆ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ.

‘ಸಾಮಾಜಿಕ ಸಮಸ್ಯೆಗಳ ಹೆಚ್ಚಳ’
ಹೆಣ್ಣುಮಗುವನ್ನು ಬಾಲ್ಯದಲ್ಲಿಯೇ ಒತ್ತಾಯದಿಂದ ಮದುವೆ ಮಾಡಿಸುವುದರಿಂದ ಆಕೆ ತಕ್ಷಣದ ಸಮಸ್ಯೆಯ ಜೊತೆಗೆ, ಜೀವನ ಪರ್ಯಂತ ಸಮಸ್ಯೆಗಳಿಗೆ ಈಡಾಗುತ್ತಾಳೆ. ಶಿಕ್ಷಣ ನಿಂತು ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾಗುವುದರಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಗಂಡನಿಂದ ಶೋಷಣೆಗೆ ಒಳಗಾಗುತ್ತಾಳೆ. ಇದರಿಂದ ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತವೆ ಎಂದು ಯುನಿಸೆಫ್‌ನ ಸಲಹೆಗಾರ್ತಿ ಅಂಜು ಮಲ್ಹೋತ್ರಾ ಹೇಳಿದ್ದಾರೆ.

*
ಹೆಣ್ಣುಮಗುವನ್ನು ಬಾಲ್ಯದಲ್ಲಿಯೇ ಒತ್ತಾಯದಿಂದ ಮದುವೆ ಮಾಡಿಸುವುದರಿಂದ ಆಕೆ ತಕ್ಷಣದ ಸಮಸ್ಯೆಯ ಜೊತೆಗೆ, ಜೀವನಪರ್ಯಂತ ಸಮಸ್ಯೆಗಳಿಗೆ ಈಡಾಗುತ್ತಾಳೆ. ಶಿಕ್ಷಣ ನಿಂತು ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾಗುವುದರಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಗಂಡನಿಂದ ಶೋಷಣೆಗೆ ಒಳಗಾಗುತ್ತಾಳೆ. ಇದರಿಂದ ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತವೆ.
–ಅಂಜು ಮಲ್ಹೋತ್ರಾ,
ಯುನಿಸೆಫ್‌ನ  ಸಲಹೆಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT