ನಿಧನ: ಪೋಷಕ ನಟಿ ಶಮ್ಮಿ

7

ನಿಧನ: ಪೋಷಕ ನಟಿ ಶಮ್ಮಿ

Published:
Updated:
ನಿಧನ: ಪೋಷಕ ನಟಿ ಶಮ್ಮಿ

ಮುಂಬೈ: ಬಾಲಿವುಡ್‌ನ ಹಿರಿಯ ಪೋಷಕ ನಟಿ ಶಮ್ಮಿ (89) ಮಂಗಳವಾರ ನಿಧನರಾದರು. ಸುಮಾರು 200 ಅಧಿಕ ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಕೆಲ ಕಾಲದಿಂದ ಅಸ್ವಸ್ಥರಾಗಿದ್ದರು.

ನಿರ್ಮಾಪಕ ದಿ.ಸುಲ್ತಾನ್‌ ಅಹ್ಮದ್‌ ಅವರ ಪತ್ನಿಯಾದ, ಪಾರ್ಸಿ ಸಮುದಾಯದ ಶಮ್ಮಿ ಅವರ ಮೂಲ ಹೆಸರು ನರ್ಗಿಸ್‌. ಶಮ್ಮಿ ಆಂಟಿ ಎಂದೇ ಖ್ಯಾತರಾಗಿದ್ದ ಅವರು, ‘ದೇಖ್‌ ಭಾಯಿ ದೇಖ್‌’ ಹಾಗೂ ‘ಶ್ರೀಮಾನ್‌ ಶ್ರೀಮತ್‌’ ಚಿತ್ರಗಳಿಂದ ಹೆಚ್ಚು ಜನಪ್ರಿಯರಾಗಿದ್ದರು.

‘ಶಮ್ಮಿ ಅವರ ನಿಧನದಿಂದ ಏನೊ ಕಳೆದುಕೊಂಡಂತಾಗಿದೆ. ಅವರು ನಮ್ಮ ಕುಟುಂಬದ ನಿಕಟವರ್ತಿಯಾಗಿದ್ದರು’ ಎಂದು ಹಿರಿಯ ನಟ ಅಮಿತಾಭ್‌ ಬಚ್ಚನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry