ಲಕ್ಷ್ಮಿನಾರಾಯಣ ಭಟ್ಟ ಮುದ್ದುಕೃಷ್ಣ ಆಯ್ಕೆ

7

ಲಕ್ಷ್ಮಿನಾರಾಯಣ ಭಟ್ಟ ಮುದ್ದುಕೃಷ್ಣ ಆಯ್ಕೆ

Published:
Updated:

ಬೆಂಗಳೂರು: ಕೆ.ಎಸ್‌.ನರಸಿಂಹಸ್ವಾಮಿ ಪ್ರಶಸ್ತಿಗೆ ಕವಿ ಎನ್‌.ಎಸ್‌. ಲಕ್ಷ್ಮಿ ನಾರಾಯಣ ಭಟ್ಟ ಹಾಗೂ ಕಾವ್ಯಗಾನ ಪ್ರಶಸ್ತಿಗೆ ಸುಗಮ ಸಂಗೀತ ಗಾಯಕ ವೈ.ಕೆ. ಮುದ್ದುಕೃಷ್ಣ ಆಯ್ಕೆಯಾಗಿದ್ದಾರೆ.

‘ಪ್ರಶಸ್ತಿಯು ತಲಾ ₹ 25,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌. ಎನ್‌. ಕಲಾಕ್ಷೇತ್ರದಲ್ಲಿ ಇದೇ 10ರಂದು ಸಂಜೆ 5.30ಕ್ಕೆ ನಡೆಯಲಿದೆ.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry