ಪುಟ್ಟಣ್ಣಯ್ಯಗೆ ನಾಳೆ ‘ಹಸಿರು ನಮನ’

ಮಂಗಳವಾರ, ಮಾರ್ಚ್ 26, 2019
26 °C

ಪುಟ್ಟಣ್ಣಯ್ಯಗೆ ನಾಳೆ ‘ಹಸಿರು ನಮನ’

Published:
Updated:
ಪುಟ್ಟಣ್ಣಯ್ಯಗೆ ನಾಳೆ ‘ಹಸಿರು ನಮನ’

ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಮಾರ್ಚ್ 8ರಂದು ಮಧ್ಯಾಹ್ನ 12 ಗಂಟೆಗೆ ಜನಸಮುದಾಯದ ಧ್ವನಿಯಾಗಿದ್ದ, ಶಾಸಕರಾಗಿದ್ದ ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ‘ಹಸಿರು ನಮನ’ ಸಲ್ಲಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

ಪಾಂಡವಪುರ ಮಣ್ಣಿನಲ್ಲಿ ಹುಟ್ಟಿ, ಬೆಳೆದು ಮಣ್ಣಿನ ಮಕ್ಕಳಿಗೆ ಧ್ವನಿ ಕೊಟ್ಟಂತಹ ಪುಟ್ಟಣ್ಣಯ್ಯ ಅವರಿಗೆ ‘ಹಸಿರು ನಮನ’ ಸಲ್ಲಿಸಲಾಗುವುದು. ಅಂದು ಬೆಳಿಗ್ಗೆ 11 ಗಂಟೆಗೆ ಪಾಂಡವಪುರದ ಪೈಪ್‌ಲೈಟ್ಸ್‌ ವೃತ್ತದಿಂದ ಮೆರವಣಿಗೆ ಏರ್ಪಡಿಸಲಾಗಿದೆ.

ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry