ಅಸ್ಮಿತೆಗಾಗಿ ಪರಂಪರೆ ಅರಿವು ಬೇಕು: ಚಿಮೂ

ಸೋಮವಾರ, ಮಾರ್ಚ್ 25, 2019
21 °C

ಅಸ್ಮಿತೆಗಾಗಿ ಪರಂಪರೆ ಅರಿವು ಬೇಕು: ಚಿಮೂ

Published:
Updated:
ಅಸ್ಮಿತೆಗಾಗಿ ಪರಂಪರೆ ಅರಿವು ಬೇಕು: ಚಿಮೂ

ಬೆಂಗಳೂರು: ‘ಇಂದು ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ ಎದುರಾಗಿದೆ. ನಮ್ಮತನ ಉಳಿಸಿಕೊಳ್ಳಲು ಮತ್ತು ಸುಸಂಸ್ಕೃತವಾಗಿ ಬದುಕಲು ಈಗಿನ ಪೀಳಿಗೆಗೆ ಪರಂಪರೆಯ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಕರುನಾಡಸಿರಿ ಸಾಹಿತ್ಯ ವೇದಿಕೆ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ‘ಇತ್ತೀಚಿನ ಬೆಳವಣಿಗೆಗಳಿಂದ ಕರ್ನಾಟಕ ಪರಂಪರೆಗೆ ಮಾರಕ?’  ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನಾಡಿನ ಪರಂಪರೆಯ ಅರಿವು ಇಲ್ಲದವರು ಎಂದಿಗೂ ಬೆಳೆಯಲಾರರು. ಒಳ್ಳೆಯ ಸಂಸ್ಕೃತಿಯ ತಳಹದಿಯ ಮೇಲೆಯೇ ನಮ್ಮ ನಾಡನ್ನು ಕಟ್ಟಿ ಬೆಳೆಸ

ಬೇಕು. ಆದರೆ, ಇಂದು ಮಾಧ್ಯಮಗಳಲ್ಲಿ ಕೆಟ್ಟ ಸುದ್ದಿಗಳೇ ವಿಜೃಂಭಿಸುತ್ತಿವೆ. ಒಳ್ಳೆಯ ಸುದ್ದಿಗಳಿಗೂ ಆದ್ಯತೆ ಸಿಗಬೇಕು. ಒಳ್ಳೆಯ ಸುದ್ದಿಗಳ ಮನನದಿಂದ ಮನಸು ತಿಳಿಯಾಗುತ್ತದೆ ಎಂದರು.

ಚಿಂತಕ ಕೆ.ರಾಜ್‌ಕುಮಾರ್‌ ಮಾತನಾಡಿ, ‘80ರ ದಶಕದಲ್ಲಿ ಕನ್ನಡಪರ ಹೋರಾಟಗಾರರು ಚಳವಳಿಗಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಆದರೆ, ಇಂದು ಕನ್ನಡಪರ ಹೋರಾಟ ಎನ್ನುವುದು ಕೆಲವರಿಗೆ ಒಂದು ರೀತಿಯ ದಂಧೆ, ವ್ಯವಹಾರವಾಗಿದೆ. 2–3 ದಶಕಗಳ ಹಿಂದೆ ಕನ್ನಡದ ಜನತೆ ಬೌದ್ಧಿಕ ವಿಚಾರಗಳಿಗೆ ತುಡಿಯುತ್ತಿದ್ದರು. ಆದರೆ, ಈಗಿನವರು ಭೌತಿಕ ಲೋಲುಪತೆಗೆ ಒಳಗಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಪರಂಪರೆಯ ತಾಯಿ ಬೇರು ಇರುವುದೇ ಸಹಿಷ್ಣುತೆ, ಸಾಮರಸ್ಯ ಹಾಗೂ ಸಮನ್ವಯತೆಯಲ್ಲಿ. ಆದರೆ, ಇಂದಿನ ರಾಜಕಾರಣದಲ್ಲಿ ಎಂದೂ ಕಾಣದ ಧರ್ಮಕಾರಣ ಕಾಣುತ್ತಿದೆ. ಇದಕ್ಕೆ ಸೆಡ್ಡುಹೊಡೆಯುವಂತೆ ಜಾತಿರಾಜಕಾರಣ ತೇಲಿಬಿಟ್ಟಿದ್ದಾರೆ. 6 ಜಯಂತಿಗಳು ಈಗ 26ಕ್ಕೇರಿವೆ. ಆಳುವವರು ಓಟ್‌ ಬ್ಯಾಂಕಿಗೆ ಗಮನಹರಿಸಿ, ಜನರನ್ನು ವಿಭಜಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘44 ಸಾಲುಗಳ ನಾಡಗೀತೆಯನ್ನು ಯಾವ ಧಾಟಿಯಲ್ಲಿ, ಎಷ್ಟು ಸಾಲು ಹಾಡಬೇಕು, ಅದಕ್ಕೆ ಹೇಗೆ ಗೌರವ ಸಲ್ಲಿಸಬೇಕು ಎನ್ನುವುದನ್ನು 15 ವರ್ಷಗಳಿಂದ ಸರ್ಕಾರಗಳು ಇತ್ಯರ್ಥಪಡಿಸಿಲ್ಲ. ಇನ್ನೂ ಕೆಂಪು ಮತ್ತು ಅರಿಶಿನ ಬಣ್ಣದ ನಾಡ ಧ್ವಜವನ್ನು 51 ವರ್ಷಗಳಿಂದ ಕನ್ನಡಿಗರು ಮಾನಸಿಕವಾಗಿ ಒಪ್ಪಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry